ಕ್ರಿಕೆಟ್‌ ಲೋಕಕ್ಕೆ ಮರ್ಮಾಘಾತ: ಕಾರು ಅಪಘಾತದಲ್ಲಿ ಜೀವಕಳೆದುಕೊಂಡ ದಂತಕಥೆ ಸೈಮಂಡ್ಸ್‌

andrew
Published on

ಆಸ್ಟ್ರೇಲಿಯಾ: ಕ್ರಿಕೆಟ್‌ ಲೋಕದ ದಂತಥೆ ಎಂದೇ ಬಿಂಬಿತವಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಂಡ್ರ್ಯೋ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಗೆ 46 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಬಳಿ ಈ ಅಪಘಾತ ನಡೆದಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 14 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಪೊಲೀಸರು ಶನಿವಾರ ಸಂಜೆ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದೃಢಪಡಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ದಂತಕಥೆ ಎನ್ನಿಸಿದ್ದ ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಇಬ್ಬರೂ ಶಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಮೂರನೆಯ ಬಾರಿಗೆ ಕ್ರೀಡಾ ಲೋಕಕ್ಕೆ ದೊಡ್ಡ ಆಘಾತವಾಗಿದೆ. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಶೋಕದ ಅಲೆ ಎದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net