IPL 2024: ರೋಹಿತ್​ ಶರ್ಮಗೆ ಕಿಸ್ ಕೊಡಲು ಬಂದ ಆರ್‌ಆರ್ ಕೋಚ್! ಮುಂದೇನಾಯ್ತು? ಈ ವಿಡಿಯೋ ನೋಡಿ

WhatsApp Image 2024-04-22 at 1.34.27 PM
Published on

ಮುಂಬೈ: ಇಂದು (ಏಪ್ರಿಲ್ 22) ಜೈಪುರದಲ್ಲಿ ನಡೆಯಲಿರುವ ಐಪಿಎಲ್ 2024ರ 34ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಭರ್ಜರಿ ಪೈಪೋಟಿ ಕೊಡಲು ಸಕಲ ತಯಾರಿ ನಡೆಸುತ್ತಿವೆ. ಈ ಮಧ್ಯೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಅಭ್ಯಾಸದ ನಡೆಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಕೋಚ್ ಆದ ಶೇನ್ ಬಾಂಡ್ ರೋಹಿತ್​ರ ಕೆನ್ನೆಗೆ ಮುತ್ತಿಡಲು ಪ್ರಯತ್ನಿಸಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಾರಿಯ ಸೀಸನ್​ನಲ್ಲಿ ಸತತವಾಗಿ ಅದ್ದೂರಿ ಪ್ರದರ್ಶನ ಕೊಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ರಾಜಸ್ಥಾನ ರಾಯಲ್ಸ್ ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್​ ಎರಡು ತಂಡಗಳಿಗೆ ಪರಸ್ಪರ ಎದುರಾಳಿಯಾಗಿ ಆಡುತ್ತಿರುವ ಎರಡನೇ ಪಂದ್ಯವಾಗಿದೆ. ತಮ್ಮ ಹಿಂದಿನ ಮುಖಾಮುಖಿಯಲ್ಲಿ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಆರ್​ಆರ್​ ಆರು ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು.

ಉಭಯ ತಂಡಗಳ ನಡುವಿನ ಮತ್ತೊಂದು ಘರ್ಷಣೆಗೂ ಮುನ್ನ ನಡೆದ ಅಭ್ಯಾಸದ ವೇಳೆ ರೋಹಿತ್​ ಶರ್ಮಾಗೆ ಹಿಂಬದಿಯಿಂದ ಬಂದ ಆರ್​ಆರ್​ ಕೋಚ್ ಶೇನ್ ಬಾಂಡ್ ಹಿಟ್ ಮ್ಯಾನ್ ಕೆನ್ನೆಗೆ ಚುಂಬಿಸಲು ಪ್ರಯತ್ನಿಸಿದರು. ಅಷ್ಟರ ವೇಳೆಗೆ ಎಚ್ಚೆತ್ತುಕೊಂಡ ರೋಹಿತ್​, ಅವರನ್ನು ನೋಡಿ ಕೈ ಮೀಲಾಯಿಸಿ, ಪರಸ್ಪರ ತಬ್ಬಿಕೊಂಡು ಮಾತನಾಡಿಸಿದರು. ಈ ಅಪ್ಪುಗೆಯ ವಿಡಿಯೋ ನೋಡುಗರ ಗಮನಸೆಳೆದಿದ್ದು, ರೋಹಿತ್ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net