ಆರ್​ಸಿಬಿ ಸತತ 5ನೇ ಗೆಲುವಿನ ಓಟ: ಪ್ಲೆಸಿಸ್​ ಪಡೆ ಪ್ಲೇಆಫ್​ ಆಸೆ ಜೀವಂತ

New-Project-20
Published on

ಪ್ರಸಾದ್​ ಶೆಟ್ಟಿಗಾರ್​ ಬೆಂಗಳೂರು

ಭಾನುವಾರ ಸಂಜೆ ಉದ್ಯಾನನಗರಿಯಲ್ಲಿ ತುಂತುರು ಮಳೆ ಸುರಿದ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ರಾತ್ರಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್​ಮಳೆ ಹರಿಸಿ ಸತತ 5ನೇ ಗೆಲುವಿನ ಸಂಭ್ರಮ ಕಂಡಿದೆ. ರಜತ್​ ಪಾಟೀದಾರ್​ (52 ರನ್​, 32 ಎಸೆತ, 3 ಬೌಂಡರಿ, 3 ಸಿಕ್ಸರ್​) ಅರ್ಧಶತಕದಾಸರೆ ಮತ್ತು ಸಂಟಿತ ಬೌಲಿಂಗ್​ ಬಲದಿಂದ ಆರ್​ಸಿಬಿ ತಂಡ ಐಪಿಎಲ್​&17ರ ತನ್ನ 13ನೇ ಲೀಗ್​ ಪಂದ್ಯದಲ್ಲಿ ಪ್ರವಾಸಿ ಡೆಲ್ಲಿ ಕ್ಯಾಪಿಟಲ್ಸ್​ ಎದುರು 47 ರನ್​ಗಳಿಂದ ಗೆಲುವು ಸಾಧಿಸಿದೆ.

ಟೂರ್ನಿಯಲ್ಲಿ ಕಂಡ 6ನೇ ಜಯದೊಂದಿಗೆ ್​ಾ ಡು ಪ್ಲೆಸಿಸ್​ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇಆ್​ ಹಂತಕ್ಕೇರುವ ಣ ಆಸೆಯನ್ನು ತನ್ನ ಕೊನೇ ಲೀಗ್​ ಪಂದ್ಯದವರೆಗೂ ಜೀವಂತವಿರಿಸಿದೆ. ನಾಯಕ ರಿಷಭ್​ ಪಂತ್​ ಗೈರಿನ ಹಿನ್ನಡೆಯ ನಡುವೆ ಡೆಲ್ಲಿ ತಂಡ ಪ್ಲೇಆ್​ ಆಸೆಯನ್ನು ಬಹುತೇಕ ಕೈಚೆಲ್ಲಿದೆ.

ಮಾಡು ಇಲ್ಲವೆ ಮಡಿ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, 9 ವಿಕೆಟ್​ಗೆ 187 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪವರ್​ಪ್ಲೇನಲ್ಲೇ 4 ವಿಕೆಟ್​ ಕಳೆದುಕೊಂಡು ಚೇಸಿಂಗ್​ನಲ್ಲಿ ಲಯ ತಪ್ಪಿದ ಡೆಲ್ಲಿ, ಹಂಗಾಮಿ ನಾಯಕ ಅಕ್ಷರ್​ ಪಟೇಲ್​ (57 ರನ್​, 39 ಎಸೆತ, 5 ಬೌಂಡರಿ, 3 ಸಿಕ್ಸರ್​) ಹೋರಾಟದ ಹೊರತಾಗಿಯೂ 19.1 ಓವರ್​ಗಳಲ್ಲಿ 140 ರನ್​ಗಳಿಗೆ ಸರ್ವಪತನ ಕಂಡಿತು. ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದ ಆರ್​ಸಿಬಿ, ನಂತರ ಸತತ 5 ಜಯ ಸಾಧಿಸಿ ಪುಟಿದೇಳುವ ಮೂಲಕ ಅಭಿಮಾನಿಗಳಿಗೆ ಪುಳಕ ನೀಡಿದೆ.

ಕ್ಯಾಪಿಟಲ್ಸ್​ಗೆ ಕಡಿವಾಣ: ಆರ್​ಸಿಬಿ ಬೌಲರ್​ಗಳು 3.3 ಓವರ್​ಗಳಲ್ಲೇ ಡೆಲ್ಲಿ ತಂಡದ 4 ವಿಕೆಟ್​ ಉರುಳಿಸಿ ಮೇಲುಗೈ ಸಾಧಿಸಿದರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಎಡಗೈ ಆರಂಭಿಕ ಡೇವಿಡ್​ ವಾರ್ನರ್​ (1) ಮೊದಲ ಓವರ್​ನಲ್ಲೇ ಔಟಾದರೆ, ಅಭಿಷೇಕ್​ ಪೊರೆಲ್​ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 8 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ ಸಹಿತ 21 ರನ್​ ಸಿಡಿಸಿ ಆರ್​ಸಿಬಿಗೆ ಅಪಾಯಕಾರಿಯಾಗುವ ಲಕ್ಷಣ ತೋರಿದ ಯುವ ಆರಂಭಿಕ ಜೇಕ್​ ್ರೇಸರ್​ ಮೆಕ್​ಗುರ್ಕ್​, ಶೈ ಹೋಪ್​ ನೇರವಾಗಿ ಬಾರಿಸಿದ ಚೆಂಡು ಬೌಲರ್​ ಯಶ್​ ದಯಾಳ್​ ಎಡಗೈ ತಾಗಿ ನಾನ್​&ಸ್ಟ್ರೆ$ಕರ್​ ವಿಕೆಟ್​ಗೆ ಬಡಿದಾಗ ಕ್ರೀಸ್​ ಬಿಟ್ಟಿದ್ದ ಕಾರಣ ದುರದೃಷ್ಟವಶಾತ್​ ರನೌಟಾದರು. ಬೆನ್ನಲ್ಲೇ ಕುಮಾರ್​ ಕುಶಾಗ್ರ (2) ಔಟಾದರು. 30 ರನ್​ಗಳಿಗೆ 4 ವಿಕೆಟ್​ ಬಿದ್ದಾಗ ಶೈ ಹೋಪ್​ (29) ಮತ್ತು ಅಕ್ಷರ್​ ಪಟೇಲ್​ 5ನೇ ವಿಕೆಟ್​ಗೆ 56 ರನ್​ ಸೇರಿಸಿ ತುಸು ಚೇತರಿಕೆ ಒದಗಿಸಿದರು. ಗ್ಯುರ್ಸನ್​ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಟ್ರಿಸ್ಟಾನ್​ ಸ್ಟಬ್ಸ್​ (3) ವಿಕೆಟ್​ ನಡುವಿನ ಓಟದ ಗೊಂದಲದಿಂದ ರನೌಟಾಗಿದ್ದು ಆರ್​ಸಿಬಿಗೆ ಸಂಪೂರ್ಣ ಹಿಡಿತ ತಂದುಕೊಟ್ಟಿತು. ನಂತರ ಅಕ್ಷರ್​ ಹೋರಾಟ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net