ಡೆಲ್ಲಿ ಕ್ಯಾಪಿಟಲ್ಸ್​ಗೆ 6 ವಿಕೆಟ್‌ಗಳ ಸೋಲುಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು| Ipl2025

RCB
Published on

Ipl:2025| ಇಂದು (27) ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್​ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಿ ಸೆಣೆಸಾಟ ನಡೆಸಿದವು. ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು.

ತವರಿನಲ್ಲಿ ಡೆಲ್ಲಿ ಕ್ಯಾ​ಪಿಟಲ್ಸ್​ ಮೊದಲ ಬ್ಯಾಟಿಂಗ್ ಮಾಡಿತು. ಆದರೆ ತಾವು ಅಂದುಕೊಂಡ ಯೋಜನೆಯಂತೆ ಅಕ್ಷರ್​ ನೇತೃತ್ವದ ಡೆಲ್ಲಿ ಆಟಗಾರರು ರನ್​ ಗಳಿಸಲು ಆಗಲಿಲ್ಲ. ಆರ್​ಸಿಬಿ ಬೌಲರ್​ಗಳ ಎದುರು ರನ್​ ಕೊಳ್ಳೆ ಹೊಡೆಯಲು ವಿಫಲವಾದರು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಭುವನೇಶ್ವರ್ ಕುಮಾರ್, ಹ್ಯಾಜಲ್​ವುಡ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 162 ರನ್​ಗಳ ಸಾಧಾರಣ ರನ್​ ಗಳಿಸಿತು. 163 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆರ್​​ಸಿಬಿ ಕೇವಲ 23 ಕ್ಕೆ 3 ವಿಕೆಟ್​ ಕಳೆದುಕೊಂಡರೂ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (51) ಹಾಗೂ ಕೃನಾಲ್ ಪಾಂಡ್ಯ (73) ಅಜೇಯ ಅರ್ಧಶತಕಗಳ ನೆರವಿನಿಂದ ಇನ್ನೂ 9 ಎಸೆತಗಳು ಇರುವಂತೆಯೇ ಗೆಲುವು ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net