"ಪದೇ ಪದೇ ಅದನ್ನೇ..." ಅಂಪೈರ್​ ಜತೆಗೆ ಗಿಲ್​ ವಾಗ್ವಾದ! ಟೀಮ್ ಇಂಡಿಯಾ ಕ್ಯಾಪ್ಟನ್​ ನಡೆಗೆ ರೂಟ್​ ಕಿಡಿ | Shubman Gill

ವಿಜಯವಾಣಿ (44)
Published on

Shubman Gill: ಪ್ರಸಕ್ತ ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶುಭಮನ್ ಗಿಲ್​ ಅಂಪೈರ್ ಜೊತೆಗೆ ನಡೆಸಿದ ಮಾತಿನ ಚಕಮಕಿಗೆ ಇದೀಗ ಜೋ ರೂಟ್​ ಬೇಸರ ವ್ಯಕ್ತಪಡಿಸಿದ್ದಾರೆ.

ಎರಡನೇ ದಿನದಾಟದಲ್ಲಿ ರೆಡ್​ ಬಾಲ್​ ಬದಲಿಸುವ ವಿಚಾರವಾಗಿ ಆನ್​ಫೀಲ್ಡ್​ ಅಂಪೈರ್​ ಜೊತೆಗೆ ವಾಗ್ವಾದಕ್ಕಿಳಿದ ಟೀಮ್ ಇಂಡಿಯಾ ನಾಯಕ, ಕೆಲ ಸಮಯ ಅಂಪೈರ್​ ಮಾತನ್ನು ಒಪ್ಪಲಿಲ್ಲ. ಕೇವಲ 63 ಎಸೆತಗಳ ಬಳಿಕ ಇನ್ನಿಂಗ್ಸ್‌ನ 80ನೇ ಓವರ್‌ನಲ್ಲಿ ಎರಡನೇ ಹೊಸ ಬಾಲ್​ಗೆ ಆಗ್ರಹಿಸಿದ ಗಿಲ್​, ಆಕಾರ ಕಳೆದುಕೊಂಡ ಹಿನ್ನಲೆ ಈ ಬಾಲ್​ ಅನ್ನು ಬದಲಿಸಿಕೊಳ್ಳಲು ಅವಕಾಶ ನೀಡುವಂತೆ ಅಂಪೈರ್​ಗೆ ಮನವಿ ಸಲ್ಲಿಸಿದರು. ಆದರೆ, ಇದಕ್ಕೆ ಅಂಪೈರ್​ ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಶುಭಮನ್​ ಕೆಲ ಸಮಯ ಮೈದಾನದಲ್ಲೇ ಅಂಪೈರ್​ ಜೊತೆಗೆ ವಾಗ್ವಾದ ನಡೆಸಿದರು.

ಇನ್ನು ಗಿಲ್​ ನಡೆಗೆ ಬೇಸರ ಹೊರಹಾಕಿದ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್​ ಜೋ ರೂಟ್​, "ವೈಯಕ್ತಿಕವಾಗಿ ನನಗೆ ಅನಿಸಿದ್ದು. ಪ್ರತಿ ಬಾರಿ ನೀವು ಬಾಲ್​​ ಬದಲಿಸುವಂತೆ ಕೇಳುವುದಾದರೆ ಎಲ್ಲ ತಂಡಗಳಿಗೂ ಪ್ರತಿ 80 ಓವರ್​ಗೆ ಮೂರು ಸವಾಲುಗಳು ಎದುರಾಗುತ್ತವೆ. ಒಂದು ಬಾರಿ ಕೇಳಿ ಸುಮ್ಮನಾಗುವುದು ಸರಿ. ಅದನ್ನು ಹೊರತುಪಡಿಸಿ, ಪದೇ ಪದೇ ಕೇಳುವ ಮೂಲಕ ಪಂದ್ಯವನ್ನು ಇನ್ನಷ್ಟು ಮಂದಗತಿಯಲ್ಲಿ ಸಾಗುವಂತೆ ಏಕೆ ಮಾಡ್ತೀರಿ? ಇದನ್ನು ದೊಡ್ಡ ವಿಷಯ ಮಾಡುವುದರಲ್ಲಿ ಅರ್ಥವಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net