

ಮುಂಬೈ: ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆಲ್ರೌಂಡರ್ ರೊಮಾರಿಯೋ ಶೆರ್ಡ್ (39* ರನ್, 10 ಎಸೆತ, 3 ಬೌಂಡರಿ, 4 ಸಿಕ್ಸರ್ ಹಾಗೂ 54ಕ್ಕೆ 1 ವಿಕೆಟ್) ನಡೆಸಿದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-17ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 29 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದ್ದರೆ, ರಿಷಭ್ ಪಂತ್ ಬಳಗ 4ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಕುಸಿದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ಸಂಘಟಿತ ಬ್ಯಾಟಿಂಗ್ ನಿರ್ವಹಣೆಯೊಂದಿಗೆ ರನ್‌ಮಳೆ ಹರಿಸಿ 5 ವಿಕೆಟ್‌ಗೆ 234 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಟ್ರಿಸ್ಟಾನ್ ಸ್ಟಬ್ಸ್ (71* ರನ್, 25 ಎಸೆತ, 3 ಬೌಂಡರಿ, 7 ಸಿಕ್ಸರ್) ಹಾಗೂ ಪೃಥ್ವಿ ಷಾ (66 ರನ್, 40 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ತಂಡ 8 ವಿಕೆಟ್‌ಗೆ 205 ರನ್‌ಗಳಿಸಲಷ್ಟೇ ಶಕ್ತವಾಯಿತು.
150: ಜಸ್‌ಪ್ರೀತ್ ಬುಮ್ರಾ (124 ಪಂದ್ಯ) ಐಪಿಎಲ್‌ನಲ್ಲಿ 3ನೇ ಅತಿವೇಗವಾಗಿ 150 ವಿಕೆಟ್ ಪಡೆದ ಬೌಲರ್ ಎನಿಸಿದರು. ಲಸಿತ್ ಮಲಿಂಗ (105), ಯಜುವೇಂದ್ರ ಚಾಹಲ್ (118) ಮೊದಲೆರಡು ಸ್ಥಾನದಲ್ಲಿದ್ದಾರೆ.
24: ಮುಂಬೈ ಐಪಿಎಲ್‌ನಲ್ಲಿ 2ನೇ ಅತಿ ಹೆಚ್ಚು ಬಾರಿ 200 ಪ್ಲಸ್ ರನ್‌ಗಳಿಸಿದ ಆರ್‌ಸಿಬಿ (24) ದಾಖಲೆಯನ್ನು ಸರಿಗಟ್ಟಿತು. ಸಿಎಸ್‌ಕೆ (29) ಅಗ್ರಸ್ಥಾನದಲ್ಲಿದೆ.
84: ಮುಂಬೈ ಕೊನೇ 4 ಓವರ್‌ಗಳಲ್ಲಿ (17, 16, 19, 32) 84 ರನ್ ದೋಚಿತು.
.
2. ರೋಹಿತ್ ಶರ್ಮ (ಕೆಕೆಆರ್-ಡೆಲ್ಲಿ) ಐಪಿಎಲ್‌ನಲ್ಲಿ ಎರಡು ತಂಡಗಳ ವಿರುದ್ಧ ಸಾವಿರ ರನ್ ಪೂರೈಸಿದ 2ನೇ ಭಾರತೀಯ ಹಾಗೂ ಒಟ್ಟಾರೆ 3ನೇ ಬ್ಯಾಟರ್ ಎನಿಸಿದರು. ವಿರಾಟ್ ಕೊಹ್ಲಿ (ಡೆಲ್ಲಿ/ಸಿಎಸ್‌ಕೆ), ಡೇವಿಡ್ ವಾರ್ನರ್ (ಪಂಜಾಬ್/ಡೆಲ್ಲಿ) ಮೊದಲಿಬ್ಬರು.
32: ರೋಮಾರಿಯೋ ರ್ಶೆಾಡೊ (32) ಐಪಿಎಲ್ ಪಂದ್ಯವೊಂದರ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿದರು. ರವೀಂದ್ರ ಜಡೇಜಾ ಆರ್‌ಸಿಬಿ ಎದುರು 36 ರನ್ ಗಳಿಸಿರುವುದು ಗರಿಷ್ಠ.
6. ಮುಂಬೈ ಇಂಡಿಯನ್ಸ್(6) ಒಂದೇ ತಂಡದ ಎದುರು ಹೆಚ್ಚು 200ಪ್ಲಸ್ ರನ್‌ಗಳಿಸಿದ 2ನೇ ತಂಡ. ಪಂಜಾಬ್ ಎದುರು ಆರ್‌ಸಿಬಿ ಈ ಸಾಧನೆ ಮಾಡಿದ ಮೊದಲ ತಂಡ.
2. ಮುಂಬೈ ತಂಡ ಅಂತಿಮ ಐದು ಓವರ್‌ನಲ್ಲಿ ಗರಿಷ್ಠ ರನ್ ಕಲೆಹಾಕಿದ 2ನೇ ತಂಡ. ಗುಜರಾತ್ ಲಯನ್ಸ್ ಎದುರು ಆರ್‌ಸಿಬಿ 112 ರನ್‌ಗಳಿಸಿರುವುದು ಮೊದಲ ಗರಿಷ್ಠ ಮೊತ್ತವಾಗಿದೆ.
1. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಮೊದಲ ತಂಡ ಮುಂಬೈ ಇಂಡಿಯನ್ಸ್. ಸಿಎಸ್‌ಕೆ (148), ಟೀಮ್ ಇಂಡಿಯಾ (144) ನಂತರದ ಸ್ಥಾನದಲ್ಲಿದೆ.
4. ರೋಹಿತ್ ಶರ್ಮ ಐಪಿಎಲ್‌ನಲ್ಲಿ ಹೆಚ್ಚು ಕ್ಯಾಚ್ ಪಡೆದ 4ನೇ ಆಟಗಾರ. ಕೊಹ್ಲಿ (110), ಸುರೇಶ್ ರೈನಾ (109), ಕೈರಾನ್ ಪೊಲ್ಲಾರ್ಡ್ (103) ಹಿಂದಿನ ಸಾಧಕರು.