ಸರಣಿ ಸೋಲಿನ ನಡುವೆಯೂ ಅಗ್ರಸ್ಥಾನ ಕಾಯ್ದುಕೊಂಡ ರೋಹಿತ್ ಪಡೆ: ಆದರೆ ಫೈನಲ್ ಹಾದಿ ಕಠಿಣ

New Project (2)
Published on

ಪುಣೆ: ಟೀಮ್ ಇಂಡಿಯಾ ಕಳೆದ 12 ವರ್ಷಗಳಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ತವರಿನಲ್ಲಿ ಸಾಧಿಸಿದ್ದ ಅಮೋಘ ಪ್ರಾಬಲ್ಯಕ್ಕೆ ಪ್ರವಾಸಿ ನ್ಯೂಜಿಲೆಂಡ್ ತಂಡ ಶನಿವಾರ ಬ್ರೇಕ್ ಹಾಕಿದೆ. ಇದರೊಂದಿಗೆ ಭಾರತ ಬರೋಬ್ಬರಿ 4,331 ದಿನಗಳ ಬಳಿಕ ತವರು ನೆಲದಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿದೆ.

ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (77 ರನ್, 65 ರನ್, 9 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ, ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (104ಕ್ಕೆ 6) ದಾಳಿಗೆ ತತ್ತರಿಸಿದ ರೋಹಿತ್ ಶರ್ಮ ಪಡೆ, ಎರಡನೇ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳಿಂದ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು, ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 0-2ರಿಂದ ಬಿಟ್ಟುಕೊಟ್ಟಿದೆ. ಈ ಮೂಲಕ ಕಿವೀಸ್ ತಂಡ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿದೆ.

ಡಬ್ಲ್ಯುಟಿಸಿಯಲ್ಲಿ ಭಾರತದ ಫೈನಲ್ ಹಾದಿ ಕಠಿಣ

ಸತತ 2 ಸೋಲಿನ ನಡುವೆಯೂ ರೋಹಿತ್ ಶರ್ಮ ಪಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಫೈನಲ್ ಹಾದಿ ಕಠಿಣಗೊಂಡಿದೆ. ಮುಂಬರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಪೂರ್ವ ಸಿದ್ಧತೆ ಎನಿಸಿದ್ದ ನ್ಯೂಜಿಲೆಂಡ್ ವಿರುದ್ಧ ಸರಣಿಯ ಸೋಲಿನೊಂದಿಗೆ ಭಾರತದ ಅಂಕ ಗಳಿಕೆ ಶೇ.74.24ರಿಂದ ಶೇ. 62.82ಕ್ಕೆ ಇಳಿದಿದೆ. ಆಸ್ಟ್ರೇಲಿಯಾ ಶೇ. 62.5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಸರಣಿ ಗೆಲುವಿನೊಂದಿಗೆ ಶೇ.44.44 ರಿಂದ 50.00 ಅಂಕ ಹೆಚ್ಚಿಸಿಕೊಂಡಿರುವ ನ್ಯೂಜಿಲೆಂಡ್ 4ನೇ ಸ್ಥಾನಕ್ಕೇರಿದೆ.

ಡಬ್ಲ್ಯುಟಿಸಿಯಲ್ಲಿ ಭಾರತ ಇನ್ನೂ 6 ಟೆಸ್ಟ್ ಆಡಲಿದ್ದು, ಇದರಲ್ಲಿ 4 ಪಂದ್ಯಗಳನ್ನು ಜಯಿಸಿದರೆ ಮಾತ್ರ ಇತರ ತಂಡಗಳ ಲಿತಾಂಶ ಅವಲಂಬಿಸದೆ ೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಅಂದರೆ ಮುಂಬೈ ಟೆಸ್ಟ್ ಗೆಲುವಿನೊಂದಿಗೆ ಭಾರತ ತಂಡ ಆಸೀಸ್‌ನಲ್ಲೂ 3 ಟೆಸ್ಟ್ ಗೆಲ್ಲಬೇಕಾಗುತ್ತದೆ. ಭಾರತ ಉಳಿದ 6ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 4ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಭಾರತದ ಡಬ್ಲ್ಯುಟಿಸಿ ೈನಲ್ ಭವಿಷ್ಯವನ್ನು ಇತರ ಸರಣಿಗಳ ಲಿತಾಂಶಗಳು (ಪ್ರಮುಖವಾಗಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳ ಸರಣಿ) ನಿರ್ಧರಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net