ಸತತ ವೈಫಲ್ಯಗಳ ಸರಪಳಿ ಕಳಚಿದ ರೋಹಿತ್: ಸಿಎಸ್‌ಕೆ ಪ್ಲೇಆಫ್ ಹಾದಿ ದುರ್ಗಮ

New Project
Published on

ಮುಂಬೈ: ಸತತ ವೈಫಲ್ಯಗಳ ಸರಪಳಿ ಕಳಚಿದ ರೋಹಿತ್ ಶರ್ಮ (76* ರನ್, 45 ಎಸೆತ, 4 ಬೌಂಡರಿ, 6 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ, ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಂಡಿತು. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಬಳಗ ಅಂಕಪಟ್ಟಿಯಲ್ಲಿ 6 ಸ್ಥಾನಕ್ಕೇರಿತು. ಟೂರ್ನಿಯಲ್ಲಿ 6ನೇ ಸೋಲುಂಡ ಎಂಎಸ್ ಧೋನಿ ಬಳಗ ಕೊನೇ ಸ್ಥಾನದಲ್ಲಿ ಉಳಿದಿದ್ದು, ಪ್ಲೇಆ್ ಹಾದಿ ಅತ್ಯಂತ ದುರ್ಗಮಗೊಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತಲಾ ಐದು ಬಾರಿಯ ಚಾಂಪಿಯನ್‌ಗಳ ನಡುವಿನ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ 63 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತದತ್ತ ಸಾಗಿತು. ಆಗ ಆಲ್ರೌಂಡರ್ ರವೀಂದ್ರ ಜಡೇಜಾ (53* ರನ್, 35 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಬ್ಯಾಟರ್ ಶಿವಂ ದುಬೆ (50 ರನ್, 32 ಎಸೆತ, 2 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಬಲದಿಂದ 5 ವಿಕೆಟ್‌ಗೆ 176 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಸೂರ್ಯಕುಮಾರ್ ಯಾದವ್ (68* ರನ್, 30 ಎಸೆತ, 6 ಬೌಂಡರಿ, 5 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ 15.4 ಓವರ್‌ಗಳಲ್ಲಿ 1 ವಿಕೆಟ್‌ಗೆ 177 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ಹಾಲಿ ಆವೃತ್ತಿಯಲ್ಲಿ ಪ್ಲೇಆ್ ಅವಕಾಶ ವೃದ್ಧಿಸಿಕೊಂಡಿತು.

ಸಿಎಸ್‌ಕೆ ಪ್ಲೇಆಫ್ ಹಾದಿ ದುರ್ಗಮ

ಮುಂಬೈ ವಿರುದ್ಧದ ಸೋಲಿನೊಂದಿಗೆ ಸಿಎಸ್‌ಕೆ ತಂಡದ ಪ್ಲೇಆ್ ಹಾದಿ ದುರ್ಗಮಗೊಂಡಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 2ರಲ್ಲಿ, 6ರಲ್ಲಿ ಸೋತಿರುವ ಸಿಎಸ್‌ಕೆ 4 ಅಂಕ ಮಾತ್ರ ಹೊಂದಿದೆ. ಉಳಿದಿರುವ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಸಿಎಸ್‌ಕೆ ಒಟ್ಟು 16 ಅಂಕ ಕಲೆಹಾಕಲಿದ್ದು, ಇತರ ಪಂದ್ಯಗಳ ಲಿತಾಂಶಗಳ ಆಧಾರದಲ್ಲಿ ಮುಂದಿನ ಹಾದಿ ನಿರ್ಧರಿತವಾಗಲಿದೆ. ಇನ್ನುಳಿದಿರುವ 6ರಲ್ಲಿ 1ರಲ್ಲಿ ಸೋತರೂ ಸಿಎಸ್‌ಕೆ ಲೀಗ್ ಹಂತದಲ್ಲೇ ಹೊರಬೀಳುವ ಸಾಧ್ಯತೆಗಳಿವೆ. ಪ್ರಸ್ತುತ ಅಂಕಪಟ್ಟಿಯ ಆಧಾರದಲ್ಲಿ 16 ಅಂಕ ಕಲೆಹಾಕಿದ ತಂಡ ಪ್ಲೇಆ್ಗೇರುವ ಅವಕಾಶ ಹೊಂದಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net