ಆಫ್ಘನ್ ಟಿ20 ಸರಣಿಗೆ ರೋಹಿತ್ ಸಾರಥ್ಯ?: ಮುಂದಿನ ವಾರ ಭಾರತ ತಂಡ ಆಯ್ಕೆ ನಿರೀಕ್ಷೆ

New-Project-52
Published on

ನವದೆಹಲಿ: ಹೊಸ ವರ್ಷದ ಆರಂಭದಲ್ಲಿ ಪ್ರವಾಸಿ ಅ್ಘಾನಿಸ್ತಾನ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ಮುಂದಿನ ವಾರ ಭಾರತ ತಂಡವನ್ನು ಆರಿಸುವ ನಿರೀಕ್ಷೆ ಇದ್ದು, ರೋಹಿತ್ ಶರ್ಮ ನಾಯಕರಾಗಿ ಮರಳುವ ಸಾಧ್ಯತೆ ಇದೆ.

ರೋಹಿತ್ ಶರ್ಮ 2022ರ ಟಿ20 ವಿಶ್ವಕಪ್ ಸೆಮಿೈನಲ್‌ನಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ಯಾವುದೇ ಪಂದ್ಯ ಆಡಿಲ್ಲ. ಹಾರ್ದಿಕ್ ಪಾಂಡ್ಯ ಅವರೇ ಬಹುತೇಕ ಪಂದ್ಯಗಳಿಗೆ ನಾಯಕರಾಗಿದ್ದರೆ, ಇತ್ತೀಚೆಗೆ ಅವರ ಗೈರಿನಲ್ಲಿ ಸೂರ್ಯಕುಮಾರ್ ಯಾದವ್ ಕೂಡ 2 ಸರಣಿಗಳಿಗೆ ನಾಯಕರಾಗಿದ್ದರು. ಈ ನಡುವೆ ಹಾಂಗ್‌ರೆೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಟಿ20 ತಂಡಕ್ಕೆ ಋತುರಾಜ್ ಗಾಯಕ್ವಾಡ್ ನಾಯಕರಾಗಿದ್ದರು. ಆದರೆ ಇದೀಗ ಗಾಯದ ಸಮಸ್ಯೆಯಿಂದಾಗಿ ಈ ಮೂವರೂ ಅ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ನಾಯಕರಾಗಿ ಟಿ20 ತಂಡಕ್ಕೆ ಪುನರಾಗಮನ ಕಾಣುವ ನಿರೀಕ್ಷೆ ಹೆಚ್ಚಾಗಿದೆ. ಇದು ಮುಂದಿನ ವರ್ಷದ ಟಿ20 ವಿಶ್ವಕಪ್‌ನಲ್ಲೂ ರೋಹಿತ್ ಶರ್ಮ ನಾಯಕತ್ವದಲ್ಲೇ ಭಾರತ ತಂಡ ಕಣಕ್ಕಿಳಿಯುವ ಸ್ಪಷ್ಟ ಸೂಚನೆ ರವಾನಿಸಲಿದೆ.

ಅ್ಘಾನಿಸ್ತಾನ ವಿರುದ್ಧದ ಸರಣಿಯ 3 ಪಂದ್ಯಗಳು ಜನವರಿ 11, 14 ಮತ್ತು 17ರಂದು ಕ್ರಮವಾಗಿ ಮೊಹಾಲಿ, ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ. ‘ರೋಹಿತ್ ಶರ್ಮ ಈಗಾಗಲೆ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ. ಆದರೆ ೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ರೋಹಿತ್ ಅದಕ್ಕೆ ಮುನ್ನ ಆ್ಘನ್ ವಿರುದ್ಧ ಸರಣಿಯಲ್ಲಿ ಆಡಲು ಒಪ್ಪಿಕೊಳ್ಳುವರೇ ಎಂಬುದು ಗೊತ್ತಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಈ ಬಗ್ಗೆ ರೋಹಿತ್ ಜತೆ ಮಾತನಾಡಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಟಿ20 ತಂಡವನ್ನು ಹಂಗಾಮಿ ನಾಯಕರಾಗಿ ಮುನ್ನಡೆಸಬಲ್ಲ ಇತರ ಪ್ರಮುಖ ಆಯ್ಕೆಗಳಾದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಕಾರ್ಯದೊತ್ತಡ ತಗ್ಗಿಸುವ ಸಲುವಾಗಿ ಅ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಆಡುವ ಸಾಧ್ಯತೆಗಳಿಲ್ಲ. ಕನ್ನಡಿಗ ಕೆಎಲ್ ರಾಹುಲ್ ಈಗ ಟೆಸ್ಟ್ ತಂಡಕ್ಕೂ ವಿಕೆಟ್ ಕೀಪರ್ ಆಗಿರುವುದರಿಂದ ಅವರೂ ಟಿ20 ತಂಡಕ್ಕೆ ಮರಳುವ ಸಾಧ್ಯತೆಗಳಿಲ್ಲ. ಶ್ರೇಯಸ್ ಅಯ್ಯರ್, ಶುಭಮಾನ್ ಗಿಲ್ ಮತ್ತು ಮೊಹಮದ್ ಸಿರಾಜ್‌ಗೂ ಆ್ಘನ್ ಸರಣಿಯಿಂದ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ.

ಸಂಜು ಸ್ಯಾಮ್ಸನ್ ಟಿ20ಗೆ ವಾಪಸ್?: ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದ ಕೊನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಸರಣಿ ಗೆಲುವಿನ ರೂವಾರಿ ಎನಿಸಿರುವ ಕೇರಳದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಆ್ಘನ್ ವಿರುದ್ಧ ಸರಣಿಯಲ್ಲಿ ಟಿ20 ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ ಮತ್ತು ರಿಂಕು ಸಿಂಗ್ ಟಿ20 ತಂಡದಲ್ಲಿ ಪ್ರಮುಖ ಬ್ಯಾಟರ್‌ಗಳಾಗಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net