ಎಲ್ಲರ ಮನಗೆಲ್ಲುತ್ತಿದೆ ರೋಹಿತ್​ ಶರ್ಮ ಗೆಸ್ಚರ್​; ಅಷ್ಟಕ್ಕೂ ಈ ಅಭಿಮಾನಿ ಯಾರು ಗೊತ್ತಾ?

Sudhir Kumar Chaudhary
Published on

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ವಿಶ್ವದಾದ್ಯಂತ ರೋಹಿತ್​ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೋಟ್ಯಂತರ ಅಭಿಮಾನಿಗಳ ನಿರಂತರ ಪ್ರಾರ್ಥನೆಯ ಫಲವಾಗಿ ಭಾರತ ಕಪ್​ ಗೆದ್ದಿದ್ದು, ಇದೀಗ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅವರ ಗೆಸ್ಚರ್​ ಎಲ್ಲರ ಹೃದಯ ಗೆಲ್ಲುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್​ ಆಗುತ್ತಿದೆ.

ಟೀಮ್​ ಇಂಡಿಯಾದ ಡೈ ಹಾರ್ಡ್​ ಫ್ಯಾನ್​ ಎಂದೇ ಖ್ಯಾತಿ ಪಡೆದಿರುವ ಸುಧೀರ್​ ಕುಮಾರ್​ ಚೌಧರಿ ವಿಶ್ವದ ಯಾವುದೇ ಮೂಲೆಯಲ್ಲೂ ಭಾರತದ ಪಂದ್ಯ ನಡೆದರೂ ಅಲ್ಲಿ ಹಾಜರಾಗಿ ತಂಡವನ್ನು ಸಪೋರ್ಟ್​ ಮಾಡುತ್ತಾರೆ. ಅದೇ ರೀತಿ ಈ ಬಾರಿ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲೂ ಅವರು ಮೈದಾನದಲ್ಲಿ ಹಾಜರಾಗುವ ಮೂಲಕ ಟೀಮ್​ ಇಂಡಿಯಾವನ್ನು ಸಪೋರ್ಟ್​ ಮಾಡಿದ್ದರು. ಇದೀಗ ಅವರಿಗೆ ಟಿ20 ಕಪ್​ ಎತ್ತಿ ಹಿಡಿಯುವ ಅವಕಾಶ ದೊರೆತ್ತಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರ;್​ ಆಗುತ್ತಿದೆ. ಟೀಮ್​ ಇಂಡಿಯಾ ರೋಹಿತ್​ ಶರ್ಮ ಅವರ ಗೆಸ್ಚರ್ ಎಲ್ಲರ ಮನಗೆಲ್ಲುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಯಾರೀ ಸುಧೀರ್​ ಕುಮಾರ್​ ಚೌಧರಿ?

ಟೀಮ್​ ಇಂಡಿಯಾದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಸಚಿನ್​ ತೆಂಡೂಲ್ಕರ್ ಅವರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದು, ಈ ವ್ಯಕ್ತಿಗೆ ಸಚಿನ್​ ತೆಂಡೂಲ್ಕರ್​ ಅವರೇ ಸ್ವತಃ ಅಭಿಮಾನಿಯಾಗಿದ್ದಾರೆ. ಸಚಿನ್​ ತೆಂಡೂಲ್ಕರ್​ ನಿವೃತ್ತಿಗೂ ಮೊದಲು ಮೈದಾನದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸುಧೀರ್​ ಕುಮಾರ್​ ಅವರೇ. ಭಾರತ ದೇಶ - ವಿದೇಶ ಎಲ್ಲಿಯೇ ಆಡಲಿ, ಸುಧೀರ್​ ಹಾಜರಿ ಖಂಡಿತ ಇರುತ್ತದೆ.

ಬಿಹಾರದ ಮುಜಾಫರ್​ಪುರದವರಾದ ಇವರು ಕಡು ಬಡತನದ ಹಿನ್ನಲೆಯಿಂದ ಬಂದಿದ್ದು, ಸಚಿನ್​ ತಂಡೂಲ್ಕರ್​ ಕಂಡರೆ ಎಲ್ಲಿಲ್ಲದ ಪ್ರೀತಿ. ಸಚಿನ್​ ಆಡುತ್ತಿದ್ದ ಪ್ರತಿ ಪಂದ್ಯವನ್ನು ವೀಕ್ಷಿಸಲು ಸುಧೀರ್​ ಅಂದಿನ ಕಾಲದಲ್ಲೇ ತಮ್ಮ ಆಸ್ತಿಯನ್ನೇ ಮಾರಾಟ ಮಾಡಿದ್ದರಂತೆ. ಆ ಬಳಿಕ ಸಚಿನ್​ ಅವರನ್ನು ಭೇಟಿ ಮಾಡಿದ್ದ ಸುಧೀರ್​ ಅವರೋಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು. ಆ ಬಳಿಕ BCCI ಪ್ರತಿ ಪಂದ್ಯಕ್ಕೂ ಸುಧೀರ್ ಕುಮಾರ್ ಅವರಿಗೆ ಉಚಿತ ಟಿಕೆಟ್​ ನೀಡುವುದಾಗಿ ಘೋಷಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net