VIDEO |ದುಬೈನಲ್ಲಿ ರೋಹಿತ್ ಶರ್ಮ ಕ್ವಾರಂಟೈನ್ ವರ್ಕ್‌ಔಟ್‌ಗೆ ಪತ್ನಿ ರಿತಿಕಾ ಸಾಥ್

rohit wife workout
Published on

ನವದೆಹಲಿ: ಐಪಿಎಲ್ ಟೂರ್ನಿಗಾಗಿ ಎಲ್ಲ ತಂಡಗಳ ಆಟಗಾರರು ಈಗಾಗಲೆ ಯುಎಇ ತಲುಪಿದ್ದು, 6 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕಾಲ ಕಳೆಯುತ್ತಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಕ್ವಾರಂಟೈನ್‌ನಲ್ಲಿ ವರ್ಕಔಟ್ ಮೂಲಕ ಹೆಚ್ಚಿನ ಸಮಯ ಕಳೆಯುತ್ತಿದ್ದು, ಅವರಿಗೆ ಪತ್ನಿ ರಿತಿಕಾ ಕೂಡ ಸಾಥ್ ನೀಡಿದ್ದಾರೆ.

ಫಿಟ್ನೆಸ್ ಕಾಯ್ದುಕೊಳ್ಳಲು ವಿವಿಧ ವ್ಯಾಯಾಮಗಳನ್ನು ಮಾಡುತ್ತಿರುವ ವಿಡಿಯೋವನ್ನು ರೋಹಿತ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಅವರೊಂದಿಗೆ ಪತ್ನಿ ರಿತಿಕಾ ಕೂಡ ಕಾಣಿಸಿಕೊಂಡಿದ್ದಾರೆ. ಪುತ್ರಿ ಸಮೈರಾ ಜತೆಗೂಡಿ ರೋಹಿತ್ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

‘ಸ್ಟಾಂಗರ್ ಟುಗೆದರ್’ ಎಂದು ರೋಹಿತ್ ಶರ್ಮ ವಿಡಿಯೋಗೆ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ದಂಪತಿಯ ಈ ವರ್ಕ್‌ಔಟ್ ವಿಡಿಯೋ ಈಗ ವೈರಲ್ ಆಗಿದ್ದು, ಲಕ್ಷಾಂತರ ವೀವ್ಸ್ ಮತ್ತು ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಐಪಿಎಲ್ ಇತಿಹಾಸ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿರುವ ರೋಹಿತ್ ಶರ್ಮ, ಟೂರ್ನಿಯಲ್ಲಿ ಒಟ್ಟು 188 ಪಂದ್ಯಗಳಲ್ಲಿ 4,898 ರನ್ ಕಲೆಹಾಕಿದ್ದಾರೆ.

ಕಾಲೆಳೆದ ಯಜುವೇಂದ್ರ ಚಾಹಲ್

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಶರ್ಮ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಗಾಗ ತಮಾಷೆಯ ಕಮೆಂಟ್‌ಗಳ ಮೂಲಕ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ರೋಹಿತ್ ಶರ್ಮ ದಂಪತಿಯ ವರ್ಕ್‌ಔಟ್ ವಿಡಿಯೋಗೂ ಕಮೆಂಟ್ ಹಾಕುವ ಮೂಲಕ ಚಾಹಲ್ ಇದೇ ರೀತಿ ಕಾಲೆಳೆದಿದ್ದಾರೆ. ‘ಅಣ್ಣ ಐಪಿಎಲ್‌ನಲ್ಲಿ ಅತ್ತಿಗೆಯವರು ನಿಮ್ಮೊಂದಿಗೆ ಇನಿಂಗ್ಸ್ ಆರಂಭಿಸುವರೇ?’ ಎಂದು ಆರ್‌ಸಿಬಿ ಆಟಗಾರ ಚಾಹಲ್ ಕಮೆಂಟ್ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net