'ಹಿಟ್​ಮ್ಯಾನ್​ ಈಗ ಫಿಟ್​​ಮ್ಯಾನ್​' 20 ಕೆಜಿ ತೂಕ ಇಳಿಸಿಕೊಂಡ ರೋಹಿತ್​ ಶರ್ಮಾ! Rohit Sharma

Rohit Sharma
Published on

Rohit Sharma :ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ತೂಕ ಇಳಿಸಿಕೊಂಡು ಸಖತ್​ ಫೀಟ್​ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಮುಂಬೈನಲ್ಲಿ ನಡೆದ ಸಿಯೆಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರುವ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ಏಕದಿನ ನಾಯಕ ರೋಹಿತ್ ಶರ್ಮಾ ತಮ್ಮ ಅದ್ಭುತ ಫಿಟ್ನೆಸ್ ರೂಪಾಂತರದಿಂದ ದೇಶಾದ್ಯಂತ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಕೆಲವು ಸಮಯದಿಂದ ತಮ್ಮ ಫಿಟ್ನೆಸ್ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ 'ಹಿಟ್‌ಮ್ಯಾನ್', ತಮ್ಮ ಸಮರ್ಪಣೆಯಿಂದ 20 ಕೆಜಿ ತೂಕ ಇಳಿಸಿಕೊಂಡು ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಾಮ ಪಡೆದ ನಂತರ ರೋಹಿತ್ ಶರ್ಮಾ ತಮ್ಮ ಫಿಟ್‌ನೆಸ್‌ನತ್ತ ಗಮನ ಹರಿಸಿದ್ದಾರೆ. ಅವರು ಸುಮಾರು 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ (95 ಕೆಜಿಯಿಂದ 75 ಕೆಜಿಗೆ). 2027 ರ ಏಕದಿನ ವಿಶ್ವಕಪ್‌ವರೆಗೆ ಏಕದಿನ ಮಾದರಿಯಲ್ಲಿ ಮುಂದುವರಿಯುವ ಗುರಿಯೊಂದಿಗೆ ಅವರು ತಮ್ಮ ತ್ರಾಣ ಮತ್ತು ಫಿಟ್‌ನೆಸ್ ಅನ್ನು ಸುಧಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ರೋಹಿತ್ ಶರ್ಮಾ ತಮ್ಮ ಹೊಸ ಮತ್ತು ತಾಜಾ ಲುಕ್ ಇತ್ತೀಚೆಗೆ ನಡೆದ 'ಸಿಯಾಟ್ ಕ್ರಿಕೆಟ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಅವರು ತಮ್ಮ ಪತ್ನಿ ರಿತಿಕಾ ಸಜ್ದೇ ಅವರೊಂದಿಗೆ ರ‍್ಯಾಂಪ್ ಮೇಲೆ ಆಕರ್ಷಕ ಪ್ರವೇಶ ಮಾಡಿದರು. ರೋಹಿತ್ ಅವರ ಸ್ಲಿಮ್ ಲುಕ್ ಮತ್ತು ಸ್ಟೈಲಿಶ್ ಉಡುಗೆ ಎಲ್ಲರ ಗಮನ ಸೆಳೆಯಿತು.

ರೋಹಿತ್ ಶರ್ಮಾ ಅವರ ಫಿಟ್ನೆಸ್ ರೂಪಾಂತರವನ್ನು ನೋಡಿದ ಅಭಿಮಾನಿಗಳು ಮತ್ತು ಸಹ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. "ಇವನೇ ನಿಜವಾದ ಹಿಟ್‌ಮ್ಯಾನ್!", "ನಿಮಗೆ ಪ್ರೇರಣೆ ಬೇಕಾದರೆ, ನೀವು ರೋಹಿತ್ ಅವರನ್ನು ನೋಡಬೇಕು" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net