ಆ ಸಮಯದಲ್ಲಿ ಇದಕ್ಕಾಗಿ ಬಹಳ ಕಷ್ಟಪಡ್ತಿದ್ದೆ… ಫೋಟೋ ನೋಡಿ ರೋಹಿತ್​ ಬಿಚ್ಚಿಟ್ಟ ಹಳೆಯ ನೆನಪಿದು

WhatsApp Image 2024-04-17 at 9.29.09 PM
Published on

ಮುಂಬೈ: ಪ್ರಸ್ತುತ ಐಪಿಎಲ್​ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾ, ಸದ್ಯ ಒಂದಲ್ಲ ಒಂದು ವಿಚಾರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಾರೆ. ಐದು ಬಾರಿ ತಂಡಕ್ಕೆ ಚಾಂಪಿಯನ್​ ಪಟ್ಟವನ್ನು ತಂದುಕೊಟ್ಟಿರುವ ಹಿಟ್ ಮ್ಯಾನ್​ ಕ್ಯಾಪ್ಟನ್​ ಸ್ಥಾನ ಬದಲಾದ ದಿನದಿಂದಲೂ ಕ್ರಿಕೆಟ್ ಫ್ಯಾನ್ಸ್​ಗಳಲ್ಲಿ ಭಾರೀ ಅಸಮಾಧಾನ ಭುಗಿಲೆದಿದ್ದು, ಇದು ಮುಗಿಯದ ಅಧ್ಯಾಯದಂತಾಗಿದೆ.

ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೊಮ್ಮೆ ಸೇರ್ಪಡೆಗೊಂಡ ಹಾರ್ದಿಕ್ ಪಾಂಡ್ಯ ನೇರವಾಗಿ ಕ್ಯಾಪ್ಟನ್ ಸ್ಥಾನ ಅಲಂಕರಿಸಿದರು. ಇದು ಅಭಿಮಾನಿಗಳಿಗೆ ಕಿಂಚಿತ್ತು ಹಿಡಿಸಲಿಲ್ಲ. ಇದಕ್ಕೆ ವ್ಯಾಪಕ ವಿರೋಧ, ಅಸಮಾಧಾನ ಕೂಡ ಕೇಳಿಬಂದಿತು. ಅಂದಿನಿಂದಲೂ ಮುಂಬೈ ತಂಡದಲ್ಲಿ ಎಲ್ಲವೂ ನಿರೀಕ್ಷಿಸಿದಂತೆ ಸಾಗಲಿಲ್ಲ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಉತ್ತಮ ಬಾಂಧವ್ಯತೆ ಕಂಡುಬಂದಿದ್ದು, ಫ್ಯಾನ್ಸ್​ ಕೊಂಚ ನಿರಾಳರಾಗಿ ಹಾರ್ದಿಕ್​ ವಿರುದ್ಧ ಕೂಗದೆ, ಹಿಯಾಳಿಸದೆ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇದೆಲ್ಲದರ ನಡುವೆ 2007ರ ವಿಶ್ವಕಪ್​ನ ಫೈನಲ್​ನಲ್ಲಿ ರೋಹಿತ್​ ಶರ್ಮಾ ಇರುವಿಕೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರನ್ನು ಭಾರೀ ಆಶ್ಚರ್ಯಕ್ಕೆ ದೂಡಿದೆ. ಸ್ವತಃ ರೋಹಿತ್​ಗೆ ಈ ಫೋಟೋ ನೋಡಿ ಶಾಕ್ ಆಗಿದೆ. ಇದಕ್ಕೆ ಮುಂಬೈ ಇಂಡಿಯನ್ಸ್​ ಡ್ರೆಸ್ಸಿಂಗ್​ ರೂಮ್​ನಲ್ಲಿ ರೋಹಿತ್​ ಮತ್ತು ರೊಮ್ಯಾಲ್ರೋ ಶೆಫರ್ಡ್​ ಮಧ್ಯೆ ನಡೆದ ಸಂಭಾಷಣೆಯೇ ಸಾಕ್ಷಿ.

2007ರ ವಿಶ್ವಕಪ್​ನಲ್ಲಿ ಮಿಂಚಿದ ರೋಹಿತ್​ ಶರ್ಮಾ ಅವರ ಫೋಟೋಗಳು ಡ್ರೆಸ್ಸಿಂಗ್ ರೂಮ್​ನ ಗೋಡೆಗಳ ಮೇಲೆ ಕಂಡುಬಂದವು. ಇದನ್ನು ನೋಡಿದ ಹಿಟ್ ಮ್ಯಾನ್ ಭಾರೀ ಆಶ್ಚರ್ಯಕ್ಕೆ ಒಳಗಾಗಿದ್ದು, ಶೆಫರ್ಡ್​ "ನೀವಾಗ ಬಹಳ ಚಿಕ್ಕವರು ಅಂತ ಕಾಣಿಸುತ್ತೆ, ಸ್ಮಾಲ್ ಬಾಯ್"​ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, "ಆಗ ನಾನಿನ್ನು ಚಿಕ್ಕ ಹುಡುಗ, ಸ್ವಲ್ಪವು ಗಡ್ಡ ಇರಲಿಲ್ಲ, ಬೆಳಸಲು ಬಹಳ ಕಷ್ಟಪಡ್ತಿದ್ದೆ" ಎಂದು ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾರ ಈ ಮುದ್ದಾದ ಮಾತುಗಳು ಅವರ ಅಭಿಮಾನಿಗಳಲ್ಲಿ ಎಂದಿನಂತೆ ಅತೀವ ಸಂತಸ ತಂದಿದೆ. ಸದ್ಯ ಮುಂಬರುವ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಅಬ್ಬರ ನೋಡಲು ಫ್ಯಾನ್ಸ್ ತೀವ್ರ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net