

ಬೆಂಗಳೂರು: ಅಕ್ಟೋಬರ್ 16ರಿಂದ ನ್ಯೂಜಿಲೆಂಡ್ (NewZealand) ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ (Test Series) ಈಗಾಗಲೇ ಉಭಯ ತಂಡಗಳು ತಯಾರಿ ನಡೆಸುತ್ತಿವೆ. ಇನ್ನೂ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣವು (Chinnaswamy Stadium) 25ನೇ ಟೆಸ್ಟ್ ಪಂದ್ಯಕ್ಕೆ (Test Match) ಆತಿಥ್ಯವನ್ನು ವಹಿಸುತ್ತಿದ್ದು, ಈ ಸರಣಿಯಲ್ಲಿ ಗೆಲ್ಲುವ ಮೂಲಕ ಭಾರತ (Team India) ಮುಂಬರುವ ದಕ್ಷಿಣ ಆಫ್ರಿಕಾ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿಗೆ (Border-Gavaskar Trophy) ಸಜ್ಜಾಗಲು ಮುಂದಾಗಿದೆ.
ಇನ್ನೂ ವಾಡಿಕೆಯಂತೆ ಸರಣಿ (Series) ಆರಂಭಕ್ಕೂ ಮುನ್ನ ಉಭಯ ತಂಡಗಳ ನಾಯಕರು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತಾರೆ. ಅದರಂತೆ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ಕೂಡ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದನ್ನು ಹಂಚಿಕೊಂಡಿದ್ದು, ಇದು ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ
ಅದೇನೆಂದರೆ, ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ (Border-Gavaskar) ಸಂಬಂಧಿಸಿದಂತೆ ಟೀಮ್ ಇಂಡಿಯಾದ (Team India) ಸ್ಟಾರ್ ವೇಗಿ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ನಾಯಕ ರೋಹಿತ್ ಶರ್ಮ (Rohit Sharma) ಖಚಿತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಮಿ (Mohammed Shami) ಇನ್ನೂ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವೈದ್ಯರ ನಿಗಾದಲ್ಲಿದ್ದು, ನಾವು ಶುಭ ಸುದ್ದಿಗಾಗಿ ಕಾಯುತ್ತಿದ್ದೇವೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ವೈದ್ಯರ ನಿಗಾದಲ್ಲಿದ್ದ ಶಮಿ (Mohammes Shami) ಚೇತರಿಕೆ ಕಾಣುತ್ತಿದ್ದರಾದರೂ ಅವರು ಆಸ್ಟ್ರೇಲಿಯಾಗೆ ಬಾರದಿರುವ ವಿಚಾರ ನಿಜಕ್ಕೂ ಕಷ್ಟಕರವಾಗಿದೆ. ನಾವು ಆತನಿಗೆ ಫಿಟ್ ಆಗಲು ಸಕಷ್ಟು ಸಮಯವನ್ನು ನೀಡುತ್ತೇವೆ. ಆತ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರುಳುವ ಮುನ್ನ ದೇಶೀಯ ಟೂರ್ನಿಗಳಲ್ಲಿ ಭಾಗಿಯಾಗುವುದು ಸೂಕ್ತ ಎಂದು ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ಅಭಿಪ್ರಾಯಪಟ್ಟಿದ್ದಾರೆ.