PHOTO VIRAL | ಇಣುಕಿ ನೋಡಿ ಟ್ರೋಲ್ ಆದ್ರಾ ರೋಹಿತ್ ಶರ್ಮಾ?!

ro hit sharma'
Published on

ನವದೆಹಲಿ: ಮೈದಾನದಲ್ಲೂ, ಮೈದಾನದ ಹೊರಗೂ ರೋಹಿತ್ ಶರ್ಮಾ, ವೀಕ್ಷಕರಿಗೆ ಎಂದಿಗೂ ನೀರಸ ಕ್ಷಣಗಳನ್ನು ನೀಡುವುದೇ ಇಲ್ಲ. ಇದೀಗ ರೋಹಿತ್ ಶರ್ಮಾ ಡ್ರೆಸ್ಸಿಂಗ್​ ರೂಮ್​ನಿಂದ ಇಣುಕಿ ನೋಡುವ ಫೋಟೊ ಒಂದು ವೈರಲ್ ಆಗಿದೆ.

ಯಾವುದೇ ಸಮಯದಲ್ಲಾದರೂ ಸರಿ, ರೋಹಿತ್ ಶರ್ಮಾರ ವಿಶಿಷ್ಟ, ವಿಚಿತ್ರ ಫೋಟೊಗಳನ್ನು ಮೀಮ್‌ಗಳಾಗಿ ಪರಿವರ್ತಿಸಲು ಅಭಿಮಾನಿಗಳು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತಾರೆ.

ಇದೀಗ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ಇಂಡೀಸ್ ಟೆಸ್ಟ್ ಸರಣಿಯಲ್ಲಿ, ಮೀಮರ್‌ಗಳು ರೋಹಿತ್​ ಶರ್ಮಾರ ವರ್ತನೆಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್‌ನಿಂದ ಇಣುಕಿ ನೋಡಿರುವ ಫೋಟೊ ಲಭ್ಯವಾಗಿದ್ದು ಜನರ ಗಮನ ಸೆಳೆದಿದೆ. ಇದು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​ ಹಬ್ಬವನ್ನು ಹುಟ್ಟುಹಾಕಿದೆ. ಈ ಫೋಟೊ ರೋಹಿತ್ ಶರ್ಮಾರ ಸೋಮವಾರದ ಬೆಳಗಿನ ಆಲಸ್ಯ ಮತ್ತು ಗೊಂದಲಕ್ಕೊಳಗಾದ ಭಾವನೆಗೆ ಸಂಬಂಧಿಸಿರಬಹುದು ಎನ್ನಲಾಗಿದೆ.

ಒಂದೆರಡು ಮೀಮ್​ಗಳನ್ನು ನಿಮ್ಮ ಆನಂದಕ್ಕಾಗಿ ಇಲ್ಲಿ ಲಗತ್ತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net