

ವಿಶಾಖಪಟ್ಟಣ: ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ಆರಂಭದಲ್ಲಿ ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ತಾಳ್ಮೆ ಮಿಶ್ರಿತ ಆಕ್ರಮಣಕಾರಿ ಆಟದೊಂದಿಗೆ ಭಾರತಕ್ಕೆ ಸವಾಲಾಗುತ್ತ ಸಾಗುತ್ತಿದ್ದ ಇಂಗ್ಲೆಂಡ್ ಆರಂಭಿಕ ಜಾಕ್ ಕ್ರೌಲಿ ತಂದುಕೊಡುವಲ್ಲಿ ಭಾರತಕ್ಕೆ ಡಿಆರ್ಎಸ್ ನೆರವಾಯಿತು.
ಕುಲದೀಪ್ ಎಸೆತದಲ್ಲಿ ಕ್ರೌಲಿ ಪ್ಯಾಡ್ಗೆ ಬಡಿದ ಚೆಂಡು ಲೆಗ್ಸ್ಟಂಪ್ನಿಂದ ಹೊರಹೋಗುವಂತೆ ಕಾಣಿಸಿತು. ಭಾರತದ ಮನವಿಯನ್ನು ಅಂಪೈರ್ ಎರಾಸ್ಮಸ್ ತಿರಸ್ಕರಿಸಿದರು. ಭಾರತ ಡಿಆರ್ಎಸ್ ಮೊರೆ ಹೋದಾಗ, ಚೆಂಡು ಲೆಗ್ಸ್ಟಂಪ್ಗೆ ಬಡಿಯುವುದು ಸ್ಪಷ್ಟವಾದ ಕಾರಣ ಕ್ರೌಲಿಯ ಅಮೂಲ್ಯ ವಿಕೆಟ್ ಕುಲದೀಪ್ ಪಾಲಾಯಿತು.
ಆದರೆ ಕೆಲ ಕ್ರಿಕೆಟ್ ಪಂಡಿತರು ಈ ತೀರ್ಪಿನ ಬಳಿಕ ತಂತ್ರಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರು. ಪಂದ್ಯದ ಬಳಿಕ ಎದುರಾಳಿ ನಾಯಕ ಬೆನ್ ಸ್ಟೋಕ್ಸ್ ಕೂಡ ತಂತ್ರಜ್ಞಾನವೂ ಶೇ. 100 ಪರಿಪೂರ್ಣವಲ್ಲ ಎಂದು ಅಸಮಾಧಾನ ಹೊರಹಾಕಿದರು.