

ಕೊಲಂಬೊ: ನಿನ್ನೆ (ಆ.07) ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕಡೆಯ ಏಕದಿನ ಸರಣಿಯ ಪಂದ್ಯದಲ್ಲಿ 110 ರನ್ಗಳಿಂದ ಹೀನಾಯ ಸೋಲು ಅನುಭವಿಸಿದ ಭಾರತಕ್ಕೆ ಸಿರೀಸ್ ಟೈ ಮಾಡಿಕೊಳ್ಳುವ ಅವಕಾಶ ಸಂಪೂರ್ಣವಾಗಿ ಕೈತಪ್ಪಿತು. ಕೇವಲ 138 ರನ್ ಕಲೆಹಾಕಲು ಶಕ್ತವಾದ ಭಾರತ, ಆಲ್ಔಟ್ ಆಗುವ ಮೂಲಕ ಆತಿಥೇಯರ ಎದುರು ಭಾರೀ ಮುಖಭಂಗವನ್ನು ಅನುಭವಿಸಿತು. ಸದ್ಯ ಟೀಮ್ ಇಂಡಿಯಾ ಸೋಲಿಗಾಗಿ ಕಾದುಕುಳಿತ್ತಿದ್ದ ಪಾಕ್ ಕ್ರಿಕೆಟಿಗರು ಇದೀಗ ಒಬ್ಬರಂತೆ ಒಬ್ಬರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ. ಈ ಸಾಲಿಗೆ ಈಗ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಜಾಹಿದ್ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅದ್ದೂರಿ ಆಚರಣೆ: ಎಡಿಸಿ
ಟೀಮ್ ಇಂಡಿಯಾಗೆ ಜಸ್ಪ್ರಿತ್ ಬುಮ್ರಾ ಇಲ್ಲದಿದ್ದರೆ ಇಡೀ ತಂಡವೇ ಶೂನ್ಯ. ಅವರಲ್ಲಿ ಬೌಲಿಂಗ್ ಯೂನಿಟ್ ಬಲವಾಗಿಲ್ಲ. ಸಂಪೂರ್ಣವಾಗಿ ಬುಮ್ರಾರನ್ನೇ ನಂಬಿಕೊಂಡಿದ್ದಾರೆ ಎಂದು ಜುನೈದ್ ಖಾನ್ ಟೀಕಿಸಿದ್ದರು. ಇದೀಗ ಖಾನ್ ಬೆನ್ನಲ್ಲೇ ಮಾತನಾಡಿರುವ ಜಾಹಿದ್, "ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ಗಿಂತಲೂ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಅತ್ಯುತ್ತಮ ಎಂದು ಹೊಗಳಿದ್ದಾರೆ. ಈ ವಿಷಯದಲ್ಲಿ ಕೊಹ್ಲಿ ಬದಲು ನಾನು ಶರ್ಮರನ್ನು ಮೆಚ್ಚುವೆ" ಎಂದಿದ್ದಾರೆ.
"ರೋಹಿತ್ ಬ್ಯಾಟಿಂಗ್ ವೈಖರಿ ನಿಜಕ್ಕೂ ಮೆಚ್ಚುವಂತದ್ದು. ಅವರು ಕ್ರೀಸ್ನಲ್ಲಿ ನಿಂತು, ಬಾಲ್ ಎದುರಿಸುವ ರೀತಿ ಬಹಳ ಚೆನ್ನಾಗಿದೆ. ಶರ್ಮರ ಬ್ಯಾಟಿಂಗ್ ಶೈಲಿಯನ್ನು ನೋಡಿದಾಗ ನನಗೆ ಇಂಜಮಾಮ್-ಉಲ್-ಹಕ್ ಅವರೇ ನೆನಪಾಗುತ್ತಾರೆ. ರೋಹಿತ್ ಉಲ್-ಹಕ್ರನ್ನು ಹೋಲುತ್ತಾರೆ. ನನಗೆ ವಿರಾಟ್ ಕ್ಲಾಸ್ ಅಂತ ಗೊತ್ತಿದೆ. ಆದ್ರೆ, ಈ ವಿಷಯದಲ್ಲಿ ರೋಹಿತ್ ಅವರಿಗಿಂತಲೂ ಒಂದೆಜ್ಜೆ ಮುಂದಿದ್ದಾರೆ. ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ನನ್ನ ಪ್ರಕಾರ ರೋಹಿತ್ ಅವರೇ ಬೆಸ್ಟ್" ಎಂದು ಹೇಳಿದ್ದಾರೆ.
ಇದನ್ನೂ ಓದಿ: 18ರಂದು ವೈದ್ಯಕೀಯ ಉಚಿತ ಶಿಬಿರ
"ಕಳೆದ ವರ್ಷಗಳಲ್ಲಿ ರೋಹಿತ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಬ್ಯಾಟಿಂಗ್ ಶೈಲಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸುವ ಶರ್ಮ, ಮೈದಾನದಲ್ಲಿ ಎದುರಿಸುವ ಮೊದಲ ಬಾಲ್ನಿಂದ ಕೊನೆಯ ಬಾಲ್ವರೆಗೆ ಅತ್ಯುತ್ತಮ ಶಾಟ್ಸ್ಗಳನ್ನು ಆಡುತ್ತಾರೆ. ಅವರ ಬ್ಯಾಟಿಂಗ್ ವೈಖರಿ ತಂಡದ ಇತರೆ ಕ್ರಿಕೆಟಿಗರಿಗೂ ಮಾದರಿಯಾಗಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ತಂಡಕ್ಕಾಗಿ ಅತ್ಯಧಿಕ ರನ್ ಗಳಿಸಿದ ರೋಹಿತ್, ಅಂದು ಟೀಮ್ ಇಂಡಿಯಾವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದರು" ಎಂದು ಹೇಳಿದ್ದಾರೆ.
ಸದ್ಯ ಜಾಹಿದ್ ಅವರ ಈ ಹೇಳಿಕೆ ಒಂದು ರೀತಿ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ವಿರಾಟ್ರನ್ನು ಹೋಲಿಸಿ ಹೇಳುವ ಅವಶ್ಯಕತೆ ಇರಲಿಲ್ಲವೇನೋ ಎಂದು ಅಭಿಪ್ರಾಯಿಸುವಂತೆ ಮಾಡಿದೆ,(ಏಜೆನ್ಸೀಸ್).