ರಾಷ್ಟ್ರಧ್ವಜಕ್ಕೆ ಅಗೌರವ; ವಿವಾದದಲ್ಲಿ ಸಿಲುಕಿದ ರೋಹಿತ್ ಶರ್ಮಾ

Rohit Sharma Disrespecting Indian Flag His New DP Creates Controversy
Published on

ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನಿರೀಕ್ಷಿತವಾಗಿ ವಿವಾದಕ್ಕೆ ಸಿಲುಕಿದ್ದಾರೆ. ಕೆಲವು ನೆಟಿಜನ್‌ಗಳು ಹಿಟ್ ಮ್ಯಾನ್ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ಕಳೆದ ತಿಂಗಳು ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು. ಈ ಸಂಭ್ರಮಾಚರಣೆಯ ನಡುವೆ ಭಾರತ ತಂಡದ ನಾಯಕ ಕೆನ್ಸಿಂಗ್ಟನ್ ಓವಲ್‌ನಲ್ಲಿ ತ್ರಿವರ್ಣ ಧ್ವಜ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಕ್ಷಣದಲ್ಲಿ ಧ್ವಜ ಆಕಸ್ಮಿಕವಾಗಿ ಧ್ವಜ  ನೆಲಕ್ಕೆ ತಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

ಅದೇ ಫೋಟೋವನ್ನು ರೋಹಿತ್ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಹಾಕಿಕೊಂಡಿದ್ದಾರೆ. ಇದಾದ ನಂತರ ವಿವಾದ ಶುರುವಾಗಿದೆ. ಹಲವು ನೆಟ್ಟಿಗರು ಟೀಂ ಇಂಡಿಯಾ ನಾಯಕನ ಮೇಲೆ ಕೋಪಗೊಂಡಿದ್ದಾರೆ.ರೋಹಿತ್ ಅವರ ಪ್ರೊಫೈಲ್ ಚಿತ್ರವು ಭಾರತದ ತ್ರಿವರ್ಣ ಧ್ವಜವು ನೆಲವನ್ನು ಸ್ಪರ್ಶಿಸುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ 1971 ರ ಪ್ರಕಾರ 'ರಾಷ್ಟ್ರಧ್ವಜವು ಉದ್ದೇಶಪೂರ್ವಕವಾಗಿ ನೆಲವನ್ನು ಮುಟ್ಟಬಾರದು' ಎಂದು ಅಭಿಮಾನಿಯೊಬ್ಬರು ಹಿಟ್ ಮ್ಯಾನ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೂ ಈ ವಿಷಯ ತಿಳಿದಿದೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ರೋಹಿತ್ ಶರ್ಮಾ ಎಚ್ಚರಿಕೆ ವಹಿಸಬೇಕು ಎಂದು ಕೆಲವರು ಹೇಳುತ್ತಾರೆ. ಈ ವಿವಾದದ ಬಗ್ಗೆ ರೋಹಿತ್ ಶರ್ಮಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net