ಕನ್ನಡಿಗ ಕರುಣ್ ಮತ್ತು ಬುಮ್ರಾ ಜಗಳವಾಡುತ್ತಿದ್ರೆ ರೋಹಿತ್ ಏನು ಮಾಡಿದ್ರು ನೋಡಿ... ನಗು ಬರೋದು ಖಚಿತ! Rohit Sharma ​

Rohit Sharma
Published on: 

Rohit Sharma : ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಆವೃತ್ತಿಯಲ್ಲಿ ಸತತ ಗೆಲುವಿನೊಂದಿಗೆ ಬೀಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಮುಂಬೈ ಇಂಡಿಯನ್ಸ್​ ತಂಡ ಶಾಕ್​ ನೀಡಿದೆ. ಈ ಸೀಸನ್​ನಲ್ಲಿ ಡೆಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ.

ಭಾನುವಾರ (ಏ.13) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ 12 ರನ್‌ಗಳಿಂದ ಸೋಲುಂಡಿತು. ಸೋಲು-ಗೆಲುವು ಒಂದೆಡೆಯಾದರೆ, ಇದೇ ಒಂದು ಘಟನೆ ಸಹ ನಡೆಯಿತು. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್​ ಜಸ್​​ಪ್ರೀತ್​ ಬುಮ್ರಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕರುಣ್ ನಾಯರ್ ಜಗಳವಾಡಿದರು. ಇಬ್ಬರು ಪರಸ್ಪರ ನಿಂದಿಸಿದರು.

ನಿಜಕ್ಕೂ ನಡೆದಿದ್ದೇನು?

ಡೆಲ್ಲಿ ಕ್ಯಾಪಿಟಲ್ಸ್ ಪರ ಇಂಪ್ಯಾಕ್ಟ್​ ಆಟಗಾರನಾಗಿ ಮೈದಾನಕ್ಕೆ ಬಂದ ಕರುಣ್ ನಾಯರ್, ಮುಂಬೈ ಬೌಲಿಂಗ್ ಅನ್ನು ಸುಲಭವಾಗಿ ಎದುರಿಸಿದರು. ಬೌಂಡರಿಗಳ ಸುರಿಮಳೆಗೈದರು. ಪ್ರಸ್ತುತ ವಿಶ್ವದ ಅತ್ಯುತ್ತಮ ವೇಗಿ ಬುಮ್ರಾ ಬೌಲಿಂಗ್‌ನಲ್ಲಿಯೂ ಕರುಣ್​, ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು. ಬುಮ್ರಾ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಕರುಣ್ ನಾಯರ್ ಎರಡು ಬೌಂಡರಿಗಳನ್ನು ಬಾರಿಸಿ 11 ರನ್ ಗಳಿಸಿದರು. ಇದಲ್ಲದೆ, ಬುಮ್ರಾ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ 18 ರನ್‌ಗಳಿಗೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಯನ್ನು ಬಾರಿಸಿದರು. ಈ ಅನುಕ್ರಮದಲ್ಲಿ, ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು.

ಇದೇ ಸಂದರ್ಭದಲ್ಲಿ ಈ ಓವರ್‌ನಲ್ಲಿ ರನ್ ತೆಗೆದುಕೊಳ್ಳುವಾಗ ಕರುಣ್ ನಾಯರ್ ಬುಮ್ರಾ ಅವರನ್ನು ನೋಡದೆ ಡಿಕ್ಕಿ ಹೊಡೆದರು. ಅಲ್ಲದೆ, ತಕ್ಷಣ ಕ್ಷಮೆ ಕೂಡ ಕೇಳಿದರು. ಆದರೆ, ತಮ್ಮ ಬೌಲಿಂಗ್‌ನಲ್ಲಿ ಬೌಂಡರಿಗಳನ್ನು ಬಾರಿಸಿದ್ದರಿಂದ ಹತಾಸೆಗೊಂಡ ಬುಮ್ರಾ, ಕರುಣ್​ ಅವರನ್ನು ಶಪಿಸಿದರು. ಕೋಪಗೊಂಡ ಕರುಣ್ ನಾಯರ್ ಅವರಿಗೆ ತಕ್ಕ ಉತ್ತರ ನೀಡಿದರು.

ಈ ವೇಳೆ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರಿಗೂ ಎಚ್ಚರಿಕೆ ನೀಡಿದರು. ಬಳಿಕ ಕರುಣ್ ನಾಯರ್ ಅವರು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬಳಿ ಬಂದು ತಮ್ಮ ತಪ್ಪಿಲ್ಲ ಎಂದು ವಿವರಿಸಿದರು. ಮತ್ತೊಂದೆಡೆ, ಈ ಜಗಳ ನಡೆಯುತ್ತಿರುವಾಗ, ರೋಹಿತ್ ಶರ್ಮ ತಮಾಷೆಯ ಪ್ರತಿಕ್ರಿಯೆಯನ್ನು ನೀಡಿ ಜನರನ್ನು ನಗಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಈ ಪಂದ್ಯದಲ್ಲಿ, ಕರುಣ್ ನಾಯರ್ 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 89 ರನ್ ಗಳಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಮುಂಬೈ ತಂಡದ ಪರ ತಿಲಕ್ ವರ್ಮಾ (59 ರನ್​, 33 ಎಸೆತ, 6 ಬೌಂಡರಿ, 3 ಸಿಕ್ಸರ್‌) ಅರ್ಧಶತಕ ಗಳಿಸಿದರೆ, ಸೂರ್ಯಕುಮಾರ್ ಯಾದವ್ (40 ರನ್​, 28 ಎಸೆತ, 5 ಬೌಂಡರಿ, 2 ಸಿಕ್ಸರ್‌), ರಿಕಲ್ಟನ್ (41 ರನ್​, 25 ಎಸೆತ, 5 ಬೌಂಡರಿ, 2 ಸಿಕ್ಸರ್‌), ಮತ್ತು ನಮನ್ ಧೀರ್ (ಔಟಾಗದೆ 38 ರನ್​, 17 ಎಸೆತ, 3 ಬೌಂಡರಿ, 2 ಸಿಕ್ಸರ್‌) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ದೆಹಲಿ ತಂಡದ ಪರ ವಿಪ್ರಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದೆಹಲಿ ತಂಡವು 19 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ದೆಹಲಿ ಪರ ಕರುಣ್ ನಾಯರ್ (89 ರನ್​, 40 ಎಸೆತ, 12 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಅಭಿಷೇಕ್ ಪೊರೆಲ್ (33) ಅತ್ಯುತ್ತಮ ಪ್ರದರ್ಶನ ನೀಡಿದರು. ಉಳಿದವರು ಪ್ರಭಾವ ಬೀರಲು ವಿಫಲರಾದರು. ಮುಂಬೈ ಪರ ಕರ್ಣ್ ಶರ್ಮಾ ಮೂರು ವಿಕೆಟ್ ಪಡೆದರು. ಮಿಚೆಲ್ ಸ್ಯಾಂಟ್ನರ್ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)