"ನನಗೆ ನಾನು ಬೆಸ್ಟ್​ ಅನಿಸಲಿಲ್ಲ……." ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ರೋಹಿತ್ ನಿವೃತ್ತಿ?

WhatsApp Image 2024-03-09 at 6.59.37 PM
Published on

ಮುಂಬೈ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಸ್ವೀಪ್​ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡಕ್ಕೆ ಇದು ಹೆಮ್ಮೆಯ ಕ್ಷಣವಾಗಿದ್ದು, ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್​ ವಿರುದ್ಧದ ಇನ್ನಿಂಗ್ಸ್ ಗೆಲುವಿನೊಂದಿಗೆ ಮೂರು ದಿನಗಳೊಳಗೆ ಅಂತಿಮ ಟೆಸ್ಟ್ ಅನ್ನು ಟೀಮ್ ಇಂಡಿಯಾ ಅಂತ್ಯಗೊಳಿಸಿತು. ಈ ಭರ್ಜರಿ ವಿಜಯದ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಸಂತಸ ಮೂಡಿಸಿದೆ.

ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿಕೊಂಡಿದ್ದು, 9 ಪಂದ್ಯಗಳಲ್ಲಿ ಆರು ಗೆಲುವುಗಳನ್ನು ದಾಖಲಿಸುವ ಮುಖೇನ 68.51 ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್ ಅಂಕ ಶೇಕಡಾ 17.5ಕ್ಕೆ ಕುಸಿತ ಕಂಡಿದೆ. ಉಳಿದ ತಂಡಗಳು ಈ ಹಿಂದೆಯಿದ್ದ ಸ್ಥಾನದಲ್ಲೇ ಇವೆ.

ಟೆಸ್ಟ್ ಸರಣಿ ಗೆದ್ದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಕಳೆದ ಎರಡು ಮೂರು ವರ್ಷಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡರು. "ಒಂದು ದಿನ ನಾನು ಎಚ್ಚರಗೊಂಡಾಗ, ನಾನು ಬೆಸ್ಟ್​ ಎಂಬ ಭಾವನೆ ನನ್ನಲ್ಲಿ ಮೂಡದೆ ಹೋದರೆ ಅಥವಾ ಸ್ಪೋರ್ಟ್ಸ್​ ಆಡುವಷ್ಟು ಉತ್ತಮ ಅಲ್ಲ ಎಂದು ಅನಿಸಿದ್ರೆ. ಖಂಡಿತವಾಗಿ ಅಂದು ನಾನು ಅದನ್ನು ನಿವೃತ್ತಿ ಘೋಷಿಸುತ್ತೇನೆ. ಅದರ ಬಗ್ಗೆ ಮುಖ್ಯಸ್ಥರಿಗೆ ತಿಳಿಸುತ್ತೇನೆ" ಎಂದರು.

"ಆದರೆ ಪ್ರಾಮಾಣಿಕವಾಗಿ ಹೇಳಬೇಕಾದರೆ ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನನ್ನ ಕ್ರಿಕೆಟ್ ನಿಜವಾಗಿಯೂ ಉತ್ತಮವಾಗಿ ಸಾಗುತ್ತಿದೆ ಮತ್ತು ಒಳ್ಳೆಯ ಹಂತ ತಲುಪಿದೆ. ನಾನು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇನೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಸದ್ಯ ನಿವೃತ್ತಿ ಬಗ್ಗೆ ರೋಹಿತ್ ಆಡಿದ ನೇರ ಮಾತುಗಳನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು ಈ ವಿಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net