ರೋಹಿತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿರುವುದೇಕೆ? ಕೊನೆಗೂ ಮೌನ ಮುರಿದ ಜಯವರ್ಧನೆ, ಅಚ್ಚರಿ ಕಾರಣ ಹೀಗಿದೆ... Rohit Sharma

Rohit Sharma
Published on

Rohit Sharma : ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್​ ಸೀಸನ್​ನಲ್ಲಿ ಆರಂಭದಲ್ಲಿ ಸತತ ಸೋಲುಗಳಿಂದ ಮುಗ್ಗರಿಸಿದ್ದ ಮುಂಬೈ ಇಂಡಿಯನ್ಸ್​ ತಂಡ ಗೆಲುವಿನ ಹಳಿಗೆ ಬಂದಿದ್ದು, ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿರುವ ಮುಂಬೈ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಸೋಲುಂಡಿದೆ. ಸದ್ಯ 14 ಅಂಕಗಳನ್ನು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. +1.274 ನೆಟ್​ ರನ್ ರೇಟ್​ ಹೊಂದಿದೆ.

ತಂಡದ ಸ್ಟಾರ್ ಆಟಗಾರ ಮತ್ತು ಮಾಜಿ ನಾಯಕ ರೋಹಿತ್ ಶರ್ಮ ಈ ಸೀಸನ್​ನಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ರೋಹಿತ್​ರನ್ನು ಕೇವಲ ಬ್ಯಾಟಿಂಗ್‌ಗೆ ಮಾತ್ರ ಸೀಮಿತಗೊಳಿಲಾಗಿದೆ. ಈ ಬಗ್ಗೆ ಭಿನ್ನಾಭಿಪ್ರಾಯಗಳು ಸಹ ಇವೆ. ಹಾರ್ದಿಕ್, ಅನಿವಾರ್ಯತೆಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಕೋಪಗೊಂಡಿದ್ದಾರೆ.

ಈ ವಿಚಾರವಾಗಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಕೊನೆಗೂ ಮೌನ ಮುರಿದಿದ್ದಾರೆ. ರೋಹಿತ್ ಶರ್ಮ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸುವುದರ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ರೋಹಿತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸುವ ನಿರ್ಧಾರ ಈ ಸೀಸನ್​ನ ಆರಂಭಕ್ಕೂ ಮುನ್ನವೇ ತೆಗೆದುಕೊಂಡ ನಿರ್ಧಾರವಲ್ಲ. ಸದ್ಯ ರೋಹಿತ್​, ಸಣ್ಣ ಗಾಯದಿಂದ ಬಳಲುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದಲೂ ಸಣ್ಣ ಗಾಯದ ನೋವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ತರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ರೋಹಿತ್ ಶರ್ಮ ಕೆಲವು ಪಂದ್ಯಗಳಲ್ಲಿ ಫೀಲ್ಡಿಂಗ್ ಮಾಡಿದ್ದನ್ನು ಜಯವರ್ಧನೆ ನೆನಪಿಸಿಕೊಂಡರು. ರೋಹಿತ್, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದರಿಂದ ಮುಂಬೈಗೆ ಹೆಚ್ಚುವರಿ ಬೌಲಿಂಗ್ ಆಯ್ಕೆ ಸಿಗುತ್ತದೆ ಎಂದರು. ಬೌಂಡರಿಗಳ ಸುತ್ತಲೂ ವೇಗವಾಗಿ ಚಲಿಸಬಲ್ಲ ಆಟಗಾರರು ಕೆಲವು ಆಧಾರದ ಮೇಲೆ ಅಗತ್ಯವಿದೆ ಮತ್ತು ರೋಹಿತ್ ಶರ್ಮ ಬ್ಯಾಟಿಂಗ್ ತಂಡಕ್ಕೆ ತುಂಬಾ ಅಗತ್ಯವಿದೆ. ಅದಕ್ಕಾಗಿಯೇ ನಾವು ಅವರ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ತಪ್ಪಿಸಲು ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಆಡಿಸುತ್ತಿದ್ದೇವೆ ಎಂದು ಹೇಳಿದರು.

ರೋಹಿತ್ ಶರ್ಮ ಮೈದಾನದಲ್ಲಿ ಇಲ್ಲದಿದ್ದರೂ ಸಹ ತಂಡಕ್ಕೆ ಅಗತ್ಯವಾದ ಬೆಂಬಲವನ್ನು ನೀಡುತ್ತಿದ್ದಾರೆ. ಅವರು ಡಗೌಟ್‌ನಲ್ಲಿದ್ದುಕೊಂಡು ಟೈಮ್-ಔಟ್‌ಗಳ ಸಮಯದಲ್ಲಿ ಅಮೂಲ್ಯವಾದ ಸಲಹೆಯನ್ನು ನೀಡುತ್ತಾರೆ ಮತ್ತು ತಂಡದ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದರು.

ಜಯವರ್ಧನೆ ಅವರ ಹೇಳಿಕೆಗಳು ಭಾರತೀಯ ಅಭಿಮಾನಿಗಳಲ್ಲಿ ಸ್ವಲ್ಪ ಕಳವಳವನ್ನುಂಟುಮಾಡಿದೆ. ಹಿಟ್‌ಮ್ಯಾನ್ ಗಾಯದಿಂದ ಬಳಲುತ್ತಿರುವ ಕಾರಣ, ಅವರು ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಾರೆಯೇ? ಅಥವಾ ಇಲ್ಲವೇ? ಎಂಬ ಅನುಮಾನಗಳಿವೆ. ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಪ್ರಾರಂಭವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net