ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ: ಹೊಸ ದಾಖಲೆ ಬರೆಯಲು 'ಹಿಟ್​ಮ್ಯಾನ್'​ ಸಿದ್ಧ | Rohit Sharma

ವಿಜಯವಾಣಿ
Published on

Rohit Sharma: ಇದೇ ಅ.19ರಿಂದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಟೀಮ್ ಇಂಡಿಯಾ ಸನ್ನದ್ಧವಾಗಿದೆ. ಈಗಾಗಲೇ ಎರಡು ಸರಣಿಗೂ ಪ್ರತ್ಯೇಕ ತಂಡಗಳನ್ನು ಘೋಷಿಸಿರುವ ಬಿಸಿಸಿಐ, ಕ್ರಿಕೆಟ್​ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ಏಕದಿನ ತಂಡಕ್ಕೆ ವಾಪಾಸ್​ ಕರೆತಂದಿದೆ. ಇದು ಕ್ರಿಕೆಟ್​ ಅಭಿಮಾನಿಗಳ ಉತ್ಸಾಹ, ಕುತೂಹಲಕ್ಕೆ ಕಾರಣವಾಗಿದ್ದು, ಕಾಂಗರೂ ನಾಡಿನಲ್ಲಿ ರೋಹಿತ್ ಶರ್ಮ ಮತ್ತೊಂದು ದಾಖಲೆ ಬರೆಯಲು ಎದುರುನೋಡುತ್ತಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅ.19 ರಿಂದ ಆರಂಭವಾಗಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈಗಾಗಲೇ ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಮಾಜಿ ಕ್ಯಾಪ್ಟನ್ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸರಣಿಗೆಂದೇ ರೋಹಿತ್​ ಸುಮಾರು 10 ಕೆಜಿ ತೂಕ ಇಳಿಸಿಕೊಂಡಿರುವುದು ಗಮನಾರ್ಹ.

ಇನ್ನು ಈ ಸರಣಿಯಲ್ಲಿ ಹಿಟ್‌ಮ್ಯಾನ್ ಎಂಟು ಸಿಕ್ಸರ್‌ಗಳನ್ನು ಬಾರಿಸಿದರೆ, ಅವರು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್​ ಆಗಿ ಇತಿಹಾಸ ಸೃಷ್ಟಿಸಲಿದ್ದಾರೆ. ಪ್ರಸ್ತುತ, ಈ ದಾಖಲೆ ಪಾಕಿಸ್ತಾನಿ ಆಟಗಾರ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ ಆಡಿದ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 273 ಏಕದಿನ ಪಂದ್ಯಗಳಲ್ಲಿ 344 ಸಿಕ್ಸರ್‌ ಹೊಡೆದಿದ್ದಾರೆ. ಅವರ ನಂತರ, ಕ್ರಿಸ್ ಗೇಲ್, ಜಯಸೂರ್ಯ ಮತ್ತು ಧೋನಿ ಈ ಪಟ್ಟಿಯಲ್ಲಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರಿವರು

1. ಶಾಹಿದ್ ಅಫ್ರಿದಿ (ಪಾಕಿಸ್ತಾನ) – 398 ಪಂದ್ಯ, 351 ಸಿಕ್ಸರ್‌

2. ರೋಹಿತ್ ಶರ್ಮಾ (ಭಾರತ) - 273 ಪಂದ್ಯ, 344 ಸಿಕ್ಸರ್‌

3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 301 ಪಂದ್ಯ, 331 ಸಿಕ್ಸರ್‌

4. ಸನತ್ ಜಯಸೂರ್ಯ (ಶ್ರೀಲಂಕಾ) – 445 ಪಂದ್ಯ, 270 ಸಿಕ್ಸರ್‌

5. ಮಹೇಂದ್ರ ಸಿಂಗ್ ಧೋನಿ (ಭಾರತ) - 350 ಪಂದ್ಯ, 229 ಸಿಕ್ಸರ್‌

ಭಾರತ-ಆಸೀಸ್​ ಏಕದಿನ ಸರಣಿಯ ವೇಳಾಪಟ್ಟಿ

1. ಮೊದಲ ಪಂದ್ಯ: ಅ.19 (ಪರ್ತ್)

2. ಎರಡನೇ ಪಂದ್ಯ: ಅ.23 (ಅಡಿಲೇಡ್)

3. ಮೂರನೇ ಪಂದ್ಯ: ಅ.25 (ಸಿಡ್ನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net