

ನವದೆಹಲಿ: ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನಕ್ಕೇರಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಈಗ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್ ಎನಿಸಿದ್ದಾರೆ. ಇದುವರೆಗೆ ರೋಹಿತ್ ಶರ್ಮ ಈ ಶ್ರೇಯ ಹೊಂದಿದ್ದರು. ಚೆನ್ನೈ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ವೈಫಲ್ಯ ಕಂಡ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ತಲಾ 5 ಸ್ಥಾನ ಕುಸಿತ ಕಂಡಿದ್ದಾರೆ. ರೋಹಿತ್ ಶರ್ಮ 5ರಿಂದ 10ನೇ ಸ್ಥಾನಕ್ಕೆ ಕುಸಿದಿದ್ದರೆ, ಕೊಹ್ಲಿ 7ರಿಂದ 12ನೇ ಸ್ಥಾನಕ್ಕಿಳಿದಿದ್ದಾರೆ.
ಶುಭಮಾನ್ ಗಿಲ್ 5 ಸ್ಥಾನ ಬಡ್ತಿಯೊಂದಿಗೆ 14ನೇ ಸ್ಥಾನಕ್ಕೇರಿದ್ದಾರೆ. ಇದರಿಂದ ಅಗ್ರ 20ರೊಳಗೆ ಭಾರತದ ಐವರು ಬ್ಯಾಟರ್ಗಳು ಸ್ಥಾನ ಪಡೆದಂತಾಗಿದೆ. ಇಂಗ್ಲೆಂಡ್ನ ಜೋ ರೂಟ್ ನಂ. 1 ಸ್ಥಾನದಲ್ಲಿದ್ದಾರೆ.