

ನವದೆಹಲಿ: ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ '' ಭಾರತದ ಕ್ರಿಸ್ಟಿಯಾನೊ ರೊನಾಲ್ಡೊ(Ronaldo) ಮತ್ತು ಲಿಯೋನೆಲ್ ಮೆಸ್ಸಿ'' ಎಂದು ಪಾಕ್ ಕ್ರಿಕೆಟ್ನ ಮಾಜಿ ನಾಯಕ ರಶೀದ್ ಲತೀಫ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೌದು, ವಿರಾಟ್ ಮತ್ತು ರೋಹಿತ್ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. 2027ರ ವಿಶ್ವಕಪ್‌ನಲ್ಲಿ ಈ ಜೋಡಿ ಭಾಗವಹಿಸುವುದು ಭಾರತೀಯ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಆದರೆ, ಭಾರತ ತಂಡವನ್ನು ಬಲಪಡಿಸಲು ಅವರಲ್ಲಿ ಒಬ್ಬರು ತಂಡದ ಭಾಗವಾಗಿರಬೇಕು ಎಂದು ಹೇಳಿದ್ದಾರೆ.
"2027ರ ವಿಶ್ವಕಪ್ಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಎಷ್ಟು ಏಕದಿನ ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಮತ್ತು ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ. ಆದರೆ, ಹಿರಿಯ ಆಟಗಾರರು ಖಂಡಿತವಾಗಿಯೂ ಅಲ್ಲಿ ಇರಲೇಬೇಕು. ಏಕದಿನ ಕ್ರಿಕೆಟ್ ದೀರ್ಘ ಸ್ವರೂಪದ ಆಟವಾಗಿದೆ - ಇದು ಟಿ20ಗಳಂತಲ್ಲ. ಎರಡೂ ಅಲ್ಲದಿದ್ದರೂ, ಕನಿಷ್ಠ ಒಬ್ಬ ಆಟಗಾರ ತಂಡದ ಭಾಗವಾಗಿರಬೇಕು ಎಂದು ಒತ್ತಿ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳ ಜಯ ಸಾಧಿಸುವಲ್ಲಿ ಈ ಇಬ್ಬರು ಮಾಜಿ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ರೋಹಿತ್ 121 ರನ್ ಗಳಿಸಿ ಅಜೇಯ ಶತಕ ಬಾರಿಸಿದರೆ, ವಿರಾಟ್ 74 ರನ್ ಗಳಿಸಿ ಅಜೇಯರಾಗುಳಿದರು. ಭಾರತ 237 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪುವಂತೆ ಮಾಡಿದ್ದರು.(ಏಜೆನ್ಸೀಸ್)