ಟೀಮ್​ ಇಂಡಿಯಾದ ಅಭ್ಯಾಸ ಸ್ಥಳಕ್ಕೆ ಹೆಲಿಕಾಪ್ಟರ್​​ನಲ್ಲಿ ಆಗಮಿಸಿದ ರೋಹಿತ್​, ದ್ರಾವಿಡ್! ಹೀಗಿದೆ ಕಾರಣ...​

copter web
Published on

ಧರ್ಮಶಾಲಾ: ಕೊನೇ ಟೆಸ್ಟ್​ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಮಂಗಳವಾರ ಅಭ್ಯಾಸ ಆರಂಭಿಸಿದ ಎಚ್​ಪಿಸಿಎ ಸ್ಟೇಡಿಯಂಗೆ ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಹೆಲಿಕಾಪ್ಟರ್ ಮೂಲಕ ಆಗಮಿಸಿದರು.

ಬಿಲಾಸ್​ಪುರದಲ್ಲಿ ಸನ್ಸದ್​ ಖೇಲ್​ ಮಹಾಕುಂಬ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಜತೆ ಭಾಗವಹಿಸಿದ್ದ ಅವರಿಬ್ಬರು, ಅಲ್ಲಿಂದ ನೇರವಾಗಿ ಅಭ್ಯಾಸ ಸ್ಥಳಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದರು. ಭಾರತ-ಇಂಗ್ಲೆಂಡ್​ ತಂಡಗಳು ಭಾನುವಾರವೇ ಧರ್ಮಶಾಲಾಗೆ ಆಮಿಸಿದ್ದವು. ಸೋಮವಾರ ಅಭ್ಯಾಸ ಆರಂಭಿಸಲು ಮಳೆ ಅಡಚಣೆ ತಂದಿತ್ತು.

ರೋಹಿತ್​, ದ್ರಾವಿಡ್​ ಭಾನುವಾರವೇ ಧರ್ಮಶಾಲಾಗೆ ಹೋಗಿರಲಿಲ್ಲ. ರೋಹಿತ್​ ಮಂಗಳವಾರ ಮುಂಜಾನೆ 5.30ಕ್ಕೆ ದೆಹಲಿಯಿಂದ ಬಿಲಾಸ್​ಪುರಕ್ಕೆ ಹೋಗಿ, ಅಲ್ಲಿಂದ ಹೆಲಿಕಾಪ್ಟರ್​ನಲ್ಲಿ ನೇರವಾಗಿ ಅಭ್ಯಾಸಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net