VIDEO: ರೋಜರ್ ಫೆಡರರ್‌ಗೆ ಕಠಿಣ ಎದುರಾಳಿ ಈ ಕ್ರಿಕೆಟಿಗ..!

roger federer for web
Published on

ದಿಗ್ಗಜ ರೋಜರ್ ಫೆಡರರ್‌ಗೆ ಕಠಿಣ ಎದುರಾಳಿಯೊಬ್ಬರು ಇದ್ದಾರೆ. ಕೇವಲ ವೃತ್ತಿಪರ ಟೆನಿಸ್‌ನಲ್ಲಿ ಅಷ್ಟೇ ಅಲ್ಲ. ಇತರ ಕ್ರೀಡೆಯಲ್ಲೂ ಫೆಡರರ್‌ಗೆ ಎದುರಾಳಿಗಳು ಇದ್ದಾರಂತೆ. ಹೀಗೆಂದು ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ. ರಾಯಲ್ಸ್ ತಂಡದ ಜೋಸ್ ಬಟ್ಲರ್, ಟೆನಿಸ್ ಜೆರ್ಸಿ ತೊಟ್ಟು, ರ‌್ಯಾಕೆಟ್ ಹಿಡಿದು ನಿಂತಿರುವ ವಿಡಿಯೋ ಪ್ರಕಟಿಸಿರುವ ರಾಯಲ್ಸ್, ಫೆಡರರ್‌ಗೆ ಕಠಿಣ ಎದುರಾಳಿ ಎಂದು ತಂಡದ ಆಟಗಾರನ ಕಾಲೆಳೆದಿದೆ.

ಬಟ್ಲರ್ ಸರ್ವ್ ಮಾಡಿದ್ದಕ್ಕೆ ರೋಜರ್ ಫೆಡರರ್ ವಾಪಸ್ ಚೆಂಡು ಹೊಡೆದಿರುವ ರೀತಿ ಎಡಿಟ್ ಮಾಡಿರುವ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಕಡೆಯಲ್ಲಿ ಬಟ್ಲರ್‌ನಲ್ಲಿ ಪಾಯಿಂಟ್ ಗೆದ್ದ ರೀತಿಯಲ್ಲಿ ನಗುತ್ತಿದ್ದಾರೆ. ಇತ್ತೀಚೆಗೆ ಯುಎಇಯಲ್ಲಿ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಜೋಸ್ ಬಟ್ಲರ್, ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. 13 ಪಂದ್ಯಗಳಿಂದ ಸರಾಸರಿ 32.80 ರಂತೆ 328 ರನ್ ಗಳಿಸಿದ್ದರು.

ರಾಯಲ್ಸ್ ತಂಡ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಸೋಲು ಮೂಲಕ ನಿರಾಸೆ ಅನುಭವಿಸಿತು. ಇಂಗ್ಲೆಂಡ್ ತಂಡದ ಬಟ್ಲರ್ 47 ಟೆಸ್ಟ್, 145 ಏಕದಿನ ಹಾಗೂ 71 ಟಿ20 ಪಂದ್ಯಗಳನ್ನಾಡಿದ್ದಾರೆ. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net