ಜೆಮೀಮಾ, ಸ್ಮೃತಿ ಬಿರುಸಿನಾಟ: ಭಾರತ ಮಹಿಳಾ ತಂಡಕ್ಕೆ ಜಯ

New Project (1)
Published on

ಮುಂಬೈ: ಬ್ಯಾಟುಗಾರ್ತಿ ಜೆಮೀಮಾ ರೋಡ್ರಿಗಸ್ (73 ರನ್, 35 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟ ಹಾಗೂ ಉಪನಾಯಕಿ ಸ್ಮೃತಿ ಮಂದನಾ (54 ರನ್, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಸುಧಾರಿತ ಪ್ರದರ್ಶನ ನೀಡಿದ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 49 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಕಂಡಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್‌ಗೆ ಇಳಿಯಿತು. ಉಮಾ ಛೇಟ್ರಿ (24) ಹಾಗೂ ಸ್ಮತಿ ಮಂದನಾ ಉತ್ತಮ ಆರಂಭ ಒದಗಿಸಿದರು. ನಂತರ ಸ್ಮತಿ ಮಂದನಾ ಜತೆಯಾದ ಜೆಮೀಮಾ ರೋಡ್ರಿಗಸ್ ಎರಡನೇ ವಿಕೆಟ್‌ಗೆ ಕಲೆಹಾಕಿದ 44 ಎಸೆತಗಳಲ್ಲಿ 81 ರನ್ ನೆರವಿನಿಂದ ಭಾರತ 4 ವಿಕೆಟ್‌ಗೆ 195 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಕಿಯಾನಾ ಜೋಸ್ೆ (49) ಹಾಗೂ ಡಿಯೆಂಡ್ರಾ ಡಾಟಿನ್ (52 ರನ್, 28 ಎಸೆತ, 4 ಬೌಂಡರಿ, 3 ಸಿಕ್ಸರ್) ಪ್ರತಿರೋಧ ನಡುವೆಯೂ ವಿಂಡೀಸ್ 7 ವಿಕೆಟ್‌ಗೆ 146 ರನ್‌ಗಳಿಸಲಷ್ಟೇ ಶಕ್ತಗೊಂಡಿತು.

ಭಾರತ: 4 ವಿಕೆಟ್‌ಗೆ 195 (ಸ್ಮತಿ 54, ಉಮಾ 24, ಜೆಮೀಮಾ 73, ರಿಚಾ 20, ಹರ್ಮಾನ್‌ಪ್ರೀತ್ 13, ಸಜನಾ 1, ಕರೀಷ್ಮಾ 18ಕ್ಕೆ 2)

ವಿಂಡೀಸ್: 7 ವಿಕೆಟ್‌ಗೆ 146 (ಕಿಯಾನಾ 49,ಶೆಮೈನ್ 13, ಡಾಟಿನ್ 52, ಹೆನ್ರಿ 7, ಶಬಿಕಾ 15*, ಟಿಟಾಸ್ ಸಧು 37ಕ್ಕೆ 3, ದೀಪ್ತಿ ಶರ್ಮ 21ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net