

ಮುಂಬೈ: ಇರ್ಫಾನ್ ಪಠಾಣ್ (57* ರನ್, 31 ಎಸೆತ, 6 ಬೌಂಡರಿ, 3 ಸಿಕ್ಸರ್) ಸ್ಪೋಟಕ ಅರ್ಧಶತಕದ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ನ ನಾಯಕ ಸಚಿನ್ ತೆಂಡುಲ್ಕರ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ವಿಕೆಟ್ಗೆ ಶ್ರೀಲಂಕಾ ಲೆಜೆಂಡ್ಸ್ ಉತ್ತಮ ಆರಂಭ ಪಡೆದರೂ, ನಂತರದ ಓವರ್ಗಳಲ್ಲಿ ಕುಸಿತ ಕಂಡಿದ್ದರಿಂದ 8 ವಿಕೆಟ್ಗೆ 138 ರನ್ ಪೇರಿಸಲಷ್ಟೇ ಯಶ ಕಂಡಿತು. ಪ್ರತಿಯಾಗಿ ಭಾರತ ತಂಡ 18.4 ಓವರ್ಗಳಲ್ಲಿ 5 ವಿಕೆಟ್ಗೆ 139 ರನ್ ಬಾರಿಸಿ ಗೆಲುವು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪರವಾಗಿ ದೊಡ್ಡ ಇನಿಂಗ್ಸ್ ಯಾರಿಂದಲೂ ಬರಲಿಲ್ಲ. ಲಂಕಾ ಮಾಜಿ ನಾಯಕ ಮರ್ವನ್ ಅಟ್ಟಪಟ್ಟು 5 ಎಸೆತಗಳಲ್ಲಿ 1 ರನ್ ಬಾರಿಸಿ ಔಟಾದರೆ, ತಿಲಾನ್ ತುಷಾರ ಆಟ ಹೆಚ್ಚಿನ ಗಮನಸೆಳೆಯಲಿಲ್ಲ.
ಚಾಮರ ಕಪುಗೆಡರ (23ರನ್, 17 ಎಸೆತ, 3 ಬೌಂಡರಿ) ಹಾಗೂ ಸಚಿತ್ರ ಸೇನನಾಯಕೆ (19ರನ್, 15 ಎಸೆತ, 3 ಬೌಂಡರಿ) ವೇಗವಾಗಿ ಕೆಲ ರನ್ಗಳಿಸಿದ್ದರಿಂದ 16ನೇ ಓವರ್ ವೇಳೆಗೆ ಶ್ರೀಲಂಕಾ ಲೆಜೆಂಡ್ಸ್ 100ರ ಗಡಿ ದಾಟಿತು. ಕೊನೆಯಲ್ಲಿ ಅಜಂತಾ ಮೆಂಡಿಸ್ (9) ಹಾಗೂ ರಂಗನಾ ಹೆರಾತ್ (12) ವೇಗವಾಗಿ ರನ್ ಗಳಿಸಿ ತಂಡದ ಮೊತ್ತವನ್ನು 135ರ ಗಡಿ ದಾಟಿಸಿದರು
ಮೊಹಮದ್ ಕೈಫ್ ಸೂಪರ್ ಫೀಲ್ಡಿಂಗ್
ಆಡುವ ದಿನಗಳಲ್ಲಿ ಬ್ಯಾಟಿಂಗ್ಗಿಂತ ಹೆಚ್ಚಾಗಿ ಫೀಲ್ಡಿಂಗ್ ಮೂಲಕವೇ ಗಮನಸೆಳೆಯುತ್ತಿದ್ದ ಮೊಹಮದ್ ಕೈಫ್, ಪಂದ್ಯದಲ್ಲೂ ಆಕರ್ಷಕ ಕ್ಯಾಚ್ಗಳ ಮೂಲಕ ಮಿಂಚಿದರು. ತಿಲಕರತ್ನೆ ದಿಲ್ಶಾನ್ ಹಾಗೂ ಚಾಮರ ಕಪುಗೆಡರ ವಿಕೆಟ್ ಪತನದಲ್ಲಿ ಕೈಫ್ರ ಪಾತ್ರವೇ ಬಹಳ ಪ್ರಮುಖವಾಗಿತ್ತು. ಕೈಫ್ ಮಾತ್ರವಲ್ಲದೆ, ಮನ್ಪ್ರೀತ್ ಗೋನಿ ಕೂಡ ಉಪುಲ್ ಚಂದನಾ ಕ್ಯಾಚ್ಅನ್ನು ಡೀಪ್ ಮಿಡ್ವಿಕೆಟ್ ಬೌಂಡರಿಯಲ್ಲಿ ಬಹಳ ಆಕರ್ಷಕವಾಗಿ ಪಡೆದರು.
ಇಂಡಿಯಾ ಲೆಜೆಂಡ್ಸ್ನಲ್ಲಿ ಬದಲಾವಣೆ