ಮೆಗಾ ಹರಾಜಿಗೂ ಮುನ್ನ DC ತೊರೆಯುತ್ತಾರಾ Rishabh Pant? ಸ್ಟಾರ್​ ಆಟಗಾನ ಪೋಸ್ಟ್ ವೈರಲ್​

Rishabh Pant
Published on

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL)​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಈಗಾಗಲೇ ರಿಟೇನ್​ಗೆ (Retain) ಸಂಬಂಧಿಸಿದ ನಿಯಮಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಿಂಗಳಾಂತ್ಯಕ್ಕೆ ಫ್ರಾಂಚೈಸಿಗಳು (Franchise) ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದಾದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಈ ಒಂದು ವಿಚಾರ ಕ್ರೀಡಾ ಲೋಕದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.

ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೀಗ ರಿಷಭ್​ ಪಂತ್​ (Rishabh Pant) ಟ್ವೀಟ್ ಒಂದನ್ನು ಮಾಡಿದ್ದು, ಪಂತ್​ 18ನೇ ಆವೃತ್ತಿಯಲ್ಲಿ ಡೆಲ್ಲಿ ಪರ (Delhi Capitals) ಆಡುವುದಿಲ್ಲ ಎಂಬ ವಿವಾರ ನಿಜವಾಗುತ್ತೋ ಏನೋ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಈ ಮೊದಲು ಕೋಚ್​ ರಿಕಿ ಪಾಂಟಿಂಗ್​ರನ್ನು ತೆಗೆದು ಹಾಕುವ ಮೂಲಕ ಸುದ್ದಿಯಾಗಿದ್ದ ಫ್ರಾಂಚೈಸಿಯೂ ಇದೀಗ ಪಂತ್​ರನ್ನು ವತಂಡದಿಂದ ಹೊರಹಾಕಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಿಷಭ್​ (Rishabh Pant) ಟ್ವೀಟ್​ ವೈರಲ್​ ಆಗಿದೆ.

ಹರಾಜಿಗೆ ಹೋದರೆ ನಾನು ಮಾರಾಟವಾಗಬಹುದೇ ಅಥವಾ ಇಲ್ಲವೇ ಮತ್ತು ಎಷ್ಟು ಬೆಲೆಗೆ? ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಈ ಟ್ವೀಟ್ (Tweet)​ ಕ್ಷಣಾರ್ಧದಲ್ಲೇ ವೈರಲ್​ ಆಗಿದ್ದು, ನೀವು ಹರಾಜಿನಲ್ಲಿ ಕಾಣಿಸಿಕೊಂಡರೆ 20 ಕೋಟಿ ರೂಪಾಯಿಗೆ ಬಿಕರಿಯಾಗುತ್ತೀರಾ ಎಂದು ಕಮೆಂಟ್​ ಮಾಡಿದ್ದಾರೆ. ಕೆಲವರು ನೀವೊಬ್ಬ ಲೆಜೆಂಡ್​ ಆಟಗಾರನಾಗಿದ್ದು, ನಿಮಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಮೆಂಟ್​ ಹಾಕಿದ್ದಾರೆ. ಈ ಟ್ವೀಟ್​ ಸದ್ಯ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

18ನೇ ಆವೃತ್ತಿಗೆ ಸಂಬಂಧಿಸಿದ ರಿಟೇನ್​ ಪಟ್ಟಿ ಈ ತಿಂಗಲ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಅಂತಿಮವಾಗಿ ಯಾವ ಆಟಗಾರ ತಂಡದಲ್ಲಿ ಉಳಿಯಲಿದ್ದಾನೆ. ಇನ್ಯಾವ ಆಟಗಾರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬುದು ತಿಳಿಯಲಿದೆ. ಒಂದು ವೇಳೆ ರಿಷಭ್​ ಪಂತ್ (Rishabh Pant)​​ ಏನಾದರೂ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ತಂಡಗಳ ನಡುವೆ ಖರೀದಿಗಾಗಿ ಪೈಪೋಟಿ ಬೀಳುವುದಂತು ಪಕ್ಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net