

ಬೆಂಗಳೂರು: ಭಾರತೀಯ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಈ ವಿಡಿಯೋದಲ್ಲಿ ಅಂತದ್ದೇನಿದೆ ಎಂದು ನಾವು ನಿಮಗೆ ಹೇಳುತ್ತೇವೆ ಬನ್ನಿ....
ಪ್ರಸ್ತುತ, ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಸಣ್ಣ ಮಕ್ಕಳೊಂದಿಗೆ ಬೀದಿಯಲ್ಲಿ ಕುಳಿತು ಗೋಲಿ ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?: ರಿಷಬ್ ಪಂತ್ ಹಾಫ್ ಪ್ಯಾಂಟ್ ಮತ್ತು ಸ್ಲೀವ್ ಲೆಸ್ ಟೀ ಶರ್ಟ್ ಧರಿಸಿ ಕಾಣಿಸಿದ್ದಾರೆ. ಮುಖಕ್ಕೆ ಕರವಸ್ತ್ರವನ್ನೂ ಕಟ್ಟಿಕೊಂಡಿದ್ದಾರೆ. ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದ ರಿಷಬ್ ಅವರ ಕೈನಲ್ಲಿ ಗೋಲಿಗಳಿವೆ. ಮಕ್ಕಳ ಜತೆ ಬೀದಿಯಲ್ಲಿ ಕುಳಿತು ರಿಷಬ್ ಪಂತ್ ಅವರು ಗೋಲಿ ಆಡುತ್ತಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ.
ರಿಷಬ್ ಪಂತ್ ಅವರು ಗೋಲಿ ಆಡುತ್ತಿರುವ ವಿಡಿಯೋವನ್ನು 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈ ವ್ಯಕ್ತಿ ಏನು ಬೇಕಾದರೂ ಆಡಬಹುದು. ರಿಷಬ್ ಪಂತ್ ಈಸ್ ಡೌನ್ ಟು ಅರ್ಥ್. ರಿಷಬ್ ಪಂತ್ ಅವರ ಗೋಲಿ ಆಟ ನನಗೆ ಬಾಲ್ಯವನ್ನು ನೆನಪಿಸಿದೆ. ನನ್ನ ಬಾಲ್ಯದಲ್ಲಿ ನಾನು ಬಹಳಷ್ಟು ಗೋಲಿಗಳನ್ನು ಆಡಿದ್ದೇನೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.