

ಉತ್ತರಾಖಂಡ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ವಾಪಸಾಗುತ್ತಿದ್ದಾಗ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಇಂದು ಮುಂಜಾನೆ ನಡೆದಿತ್ತು.
'ಅಪಘಾತದ ಸಮಯದಲ್ಲಿ ಕಾರಿನಲ್ಲಿ ಬ್ಯಾಟ್ಸ್‌ಮನ್ ಒಬ್ಬರೇ ಇದ್ದರು. ಕಾರಿಗೆ ಬೆಂಕಿ ಹತ್ತಿಕೊಂಡದ್ದೇ ತಡ, ಅವರು ಉರಿಯುತ್ತಿರುವ ವಾಹನದಿಂದ ತಪ್ಪಿಸಿಕೊಳ್ಳಲು ವಿಂಡ್‌ಸ್ಕ್ರೀನ್ ಒಡೆದಿದ್ದಾರೆ' ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಅವರ ತಲೆ, ಮೊಣಕಾಲು ಮತ್ತು ಮೊಣಕಾಲಿಗೆ ಗಾಯಗಳಾಗಿವೆ. ಅವರ ಕಾಲು ಮುರಿದಿರಬಹುದು, ಆದ್ದರಿಂದ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಅವರಿಗೆ ಸುಟ್ಟ ಗಾಯಗಳಾಗಿದ್ದು, ಅವರ ಗಂಭೀರ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಾಲನೆ ಮಾಡುವಾಗ ಅವರಿಗೆ ಮಂಪರು ಹತ್ತಿತ್ತು. ದೆಹಲಿ-ಡೆಹ್ರಾಡೂನ್ ಮಾರ್ಗಕ್ಕೆ ಸಮೀಪವಿರುವ ರೂರ್ಕಿಯ ನರ್ಸನ್ ಗಡಿಗೆ ಸಮೀಪವಿರುವ ಹಮ್ಮದ್‌ಪುರ ಝಾಲ್ ಬಳಿ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಎಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡಾಗ ಅವರು ವಿಂಡ್‌ಸ್ಕ್ರೀನ್ ಒಡೆದು ಹೊರ ಬಂದಿದ್ದರು. (ಏಜೆನ್ಸೀಸ್)