

ನವದೆಹಲಿ: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂಬರುವ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲು ಸಂಪೂರ್ಣ ಫಿಟ್ ಆಗಿದ್ದಾರೆ. ಪಂತ್ ಫಿಟ್ನೆಸ್ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಭಾನುವಾರ ಹಸಿರು ನಿಶಾನೆ ತೋರಿದೆ ಎಂದು ವರದಿಯಾಗಿದೆ.
2022ರ ಡಿಸೆಂಬರ್ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರ ಗಾಯಗೊಂಡಿದ್ದರು. ಅದರಲ್ಲೂ ಅವರ ಬಲಮೊಣಕಾಲಿನ ಗಾಯದಿಂದಾಗಿ 3 ತಿಂಗಳ ಕಾಲ ನಡೆಯಲು ಕೂಡ ಸಾಧ್ಯವಾಗಿರಲಿಲ್ಲ.
2025ರ ಐಪಿಎಲ್ಗೆ ಮುನ್ನ ಮೆಗಾ ಹರಾಜು
ಮುಂದಿನ ವರ್ಷದ ಐಪಿಎಲ್ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಟೂರ್ನಿಯ ಆಡಳಿತ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್ ಭಾನುವಾರ ಖಚಿತಪಡಿಸಿದ್ದಾರೆ. ಐಪಿಎಲ್ನಲ್ಲಿ 3 ವರ್ಷಗಳ ನಂತರದಲ್ಲಿ ಮೆಗಾ ಹರಾಜು ನಿಗದಿಯಾಗಿದ್ದು, ಪ್ರತಿ ತಂಡಕ್ಕೆ ಮುಂಬರುವ 17ನೇ ಆವೃತ್ತಿಯ ನಂತರದಲ್ಲಿ 3-4 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಅವಕಾಶ ಲಭಿಸುವ ನಿರೀೆ ಇದೆ. ಹೀಗಾಗಿ ಮುಂದಿನ ಆವೃತ್ತಿಗೆ ಹಲವು ಆಟಗಾರರ ತಂಡಗಳು ಬದಲಾಗುವ ಸಾಧ್ಯತೆಯೂ ಇದೆ.