ಇನ್ನು ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ( Rishabh Pant) ಖರೀದಿ ಬಗ್ಗೆ ಎಲ್ಲರ ಚಿತ್ತ ಮೂಡಿತ್ತು. ಅದರಂತೆಯೇ ಆಕ್ಷನ್ನಲ್ಲಿ ರಿಷಭ್ ಹೆಸರು ಕೇಳಿಬರುತ್ತಿದ್ದಂತೆ ಚೀರಾಡಿದ ಅಭಿಮಾನಿಗಳು, ಪಂತ್ಗೆ ಭಾರೀ ಬೆಂಬಲ ಸೂಚಿಸಿದರು. ಈ ವೇಳೆ ಭರ್ಜರಿ ಬಿಡ್ಡಿಂಗ್ಗೆ ಇಳಿದ ಬಹುತೇಕ ಫ್ರಾಂಚೈಸಿಗಳು, ಪಂತ್ ಬ್ಯಾಟಿಂಗ್ ಸಾಮರ್ಥ್ಯವನ್ನು ತಮ್ಮ ತಂಡದಲ್ಲಿ ನೋಡುವ ಸಲುವಾಗಿ ಭಾರೀ ಹಣಾಹಣಿ ನಡೆಸಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ಅಂತಿಮವಾಗಿ ಎಲ್ಎಸ್ಜಿ 27 ಕೋಟಿ ರೂ.ಗೆ ರಿಷಬ್ರನ್ನು ಖರೀದಿ ಮಾಡಿಕೊಂಡಿತು.