

Rishabh Pant: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಇದೇ ಶುಕ್ರವಾರದಿಂದ ಆರಂಭವಾಗಲಿದೆ. ಪ್ರಥಮ ಬಾರಿಗೆ ಯುವ ಆಟಗಾರರಿಂದಲೇ ಕೂಡಿರುವ ಟೀಮ್ ಇಂಡಿಯಾ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಮೂರನೇ ಬಾರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗುತ್ತಿರುವ ರಿಷಭ್ ಪಂತ್, ಟೆಸ್ಟ್ ತಂಡದ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಸರಣಿ ಬೆನ್ನಲ್ಲೇ ಅಪರೂಪದ ಸಾಧನೆಯತ್ತ ಪಂತ್ ಎದುರುನೋಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಏನಾದರೂ 267 ರನ್ ಗಳಿಸಿದರೆ, ಕ್ರಿಕೆಟ್ ದಂತಕಥೆ, ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಇಂಗ್ಲೆಂಡ್ ಅಂಗಳದಲ್ಲಿ ವಿಕೆಟ್ಕೀಪರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಪ್ರಸ್ತುತ ಧೋನಿ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್ನಲ್ಲಿ ಧೋನಿ 778 ರನ್ ದಾಖಲಿಸಿದ್ದಾರೆ.
ಇನ್ನು ರಿಷಭ್ ಪಂತ್ ಎಂಟು ಟೆಸ್ಟ್ಗಳಲ್ಲಿ 511 ರನ್ ಗಳಿಸಿದ್ದು, ಈ ಸರಣಿಯಲ್ಲಿ 267 ರನ್ ಬಾರಿಸಿದರೆ ಧೋನಿ ದಾಖಲೆಯನ್ನು ಸರಿಗಟ್ಟಬಹುದು. ಪ್ರಸ್ತುತ ಪಟ್ಟಿಯಲ್ಲಿ ಪಂತ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಒಟ್ಟು 43 ಟೆಸ್ಟ್ ಪಂದ್ಯಗಳನ್ನು ಆಡಿರುವ ರಿಷಭ್, 42.1 ಸರಾಸರಿಯಲ್ಲಿ 2948 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 15 ಅರ್ಧಶತಕಗಳು ಸೇರಿವೆ. ಇದರೊಂದಿಗೆ 52 ರನ್ ಗಳಿಸಿದರೆ, ಟೆಸ್ಟ್ನಲ್ಲಿ 3000 ರನ್ಗಳ ಮೈಲಿಗಲ್ಲನ್ನು ತಲುಪಲಿದ್ದಾರೆ ಪಂತ್.