ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಯಾರಾಗಲಿದ್ದಾರೆ ವೈಸ್ ಕ್ಯಾಪ್ಟನ್?

rishabh and rahul for web
Published on

ನವದೆಹಲಿ: ಫೆಬ್ರವರಿ 6 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ವಿಕೆಟ್ ಕೀಪರ್ ರಿಷಭ್ ಪಂತ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಕೂಡ ಸರಣಿಯಿಂದ ವಿಶ್ರಾಂತಿ ಪಡೆದಿದ್ದರೆ, ಮೊದಲ ಪಂದ್ಯದಿಂದ ಉಪನಾಯಕ ಕೆಎಲ್ ರಾಹುಲ್ ವಿಶ್ರಾಂತಿ ಬಯಸಿರುವ ಹಿನ್ನೆಲೆಯಲ್ಲಿ ಪಂತ್‌ಗೆ ಈ ಲಕ್ ಒಲಿಯುವ ಸಾಧ್ಯತೆಗಳಿವೆ.

ಅಹಮದಾಬಾದ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಕಳೆದ ವರ್ಷದ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮುನ್ನಡೆಸಿದ್ದ ಶಿಖರ್ ಧವನ್ ಹೆಸರು ಉಪನಾಯಕ ಸ್ಥಾನಕ್ಕೆ ಕೇಳಿ ಬರುತ್ತಿದ್ದರೂ ಭವಿಷ್ಯದ ದೃಷ್ಟಿಯಿಂದ ರಿಷಭ್ ಪಂತ್ ಹೆಸರು ಬಲವಾಗಿ ಕೇಳಿ ಬರುತ್ತಿದೆ. ‘ಕೆಎಲ್ ರಾಹುಲ್ ಎರಡನೇ ಪಂದ್ಯಕ್ಕೆ ತಂಡ ಸೇರಿಕೊಳ್ಳುವರು.

ಮೊದಲ ಏಕದಿನ ಪಂದ್ಯಕ್ಕೆ ರಿಷಭ್ ಪಂತ್ ಅಥವಾ ಶಿಖರ್ ಧವನ್ ಇಬ್ಬರಲ್ಲಿ ಒಬ್ಬರನ್ನು ಉಪನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೆ ರೋಹಿತ್ ಶರ್ಮ ಹಾಗೂ ಕೆಎಲ್ ರಾಹುಲ್ ಬಳಿಕ ರಿಷಭ್ ಪಂತ್ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net