ಡಿ.4ಕ್ಕೆ ಕ್ರಿಕೆಟಿಗ ರಿಂಕು ಸಿಂಗ್​- ಸಂಸದೆ ಪ್ರಿಯಾ ವಿವಾಹ

ಅದ್ದೂರಿ ವಿವಾಹ ಸಮಾರಂಭದಲ್ಲಿ ಹಲವು ಕ್ರಿಕೆಟ್​ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
rinku singh
ರಿಂಕು ಸಿಂಗ್​-ಪ್ರಿಯಾ ಸರೋಜ್​ಏಜೆನ್ಸಿ
Published on: 

ಲಖನೌ: ಭಾರತದ ಕ್ರಿಕೆಟಿಗ ರಿಂಕು ಸಿಂಗ್​ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್​ ವಿವಾಹ ಡಿಸೆಂಬರ್​ 4ರಂದು ಲಖನೌದಲ್ಲಿ ನಡೆಯಲಿದೆ.

ವಿವಾಹದ ಪೂರ್ವಭಾವಿ ಸಿದ್ಧತೆಗಳು ಈಗಾಗಲೆ ಆರಂಭಗೊಂಡಿವೆ. ಗಣ್ಯರಿಗೆ ವಿವಾಹದ ಆಮಂತ್ರಣ ಪತ್ರಿಕೆ ಹಂಚಿಕೆ ಭರದಿಂದ ಸಾಗುತ್ತಿದೆ. ಅದ್ದೂರಿ ವಿವಾಹ ಸಮಾರಂಭದಲ್ಲಿ ಹಲವು ಕ್ರಿಕೆಟ್​ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೂ ಆಹ್ವಾನ ನೀಡಲಾಗಿದೆ.

ರಿಂಕು ವಿವಾಹಕ್ಕೆ ಮುನ್ನ ನ.19ರಿಂದ 29ರವರೆಗೆ ದೋಹಾದಲ್ಲಿ ರೈಸಿಂಗ್​ ಸ್ಟಾರ್​ ಏಷ್ಯಾಕಪ್​ನಲ್ಲಿ ಭಾರತ ಎ ತಂಡದ ಪರ ಉಪನಾಯಕರಾಗಿ ಆಡಲಿದ್ದಾರೆ. ರಿಂಕು-ಪ್ರಿಯಾ ನಿಶ್ಚಿತಾರ್ಥ ಕಳೆದ ವರ್ಷ ಜೂನ್​ನಲ್ಲಿ ನಡೆದಿತ್ತು.