ಯಾರಿಗೆ ಗೊತ್ತು ಅವರಿಬ್ಬರ... ಟೀಮ್ ಇಂಡಿಯಾ ದಿಗ್ಗಜ ಜೋಡಿ 'ರೋಕೊ' ಬಗ್ಗೆ ರಿಂಕು ಹೇಳಿಕೆ ವೈರಲ್​ | Rinku Singh

ದೇಶೀಯ ಕ್ರಿಕೆಟ್‌ನಲ್ಲಿ, ಏಕದಿನ (ODI) ಮತ್ತು ನಾಲ್ಕು ದಿನಗಳ ಕಾಲ ನಡೆಯುವ ಟೆಸ್ಟ್​ ಸರಣಿ ಸೇರಿದಂತೆ ಮೂರೂ ಸ್ವರೂಪಗಳಲ್ಲಿಯೂ ಆಡುವುದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
Rinku Singh
ಟೀಮ್ ಇಂಡಿಯಾ ದಿಗ್ಗಜ ಜೋಡಿ 'ರೋಕೊ' ಬಗ್ಗೆ ರಿಂಕು ಹೇಳಿಕೆ ವೈರಲ್
Published on

Rinku Singh: ಪ್ರಸ್ತುತ ಒಂದೇ ಫಾರ್ಮೆಟ್​ಗೆ ಸೀಮಿತವಾಗಿರುವ ಕುರಿತು ಬೇಸರ ಹೊರಹಾಕಿರುವ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ ರಿಂಕು ಸಿಂಗ್, ನಾನೂ ಸಹ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಸೆಯಿದೆ ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಕೇವಲ ಒಂದು ಸ್ವರೂಪದ (ಟಿ20) ಆಟಗಾರ ಎಂದು ನನ್ನನ್ನು ಗುರುತಿಸಲಾಗುತ್ತಿದೆ. ಆದರೆ, ನಾನು ಮೂರೂ ಫಾರ್ಮೆಟ್​ಗಳಲ್ಲಿ ಆಡುವ ಸಾಮರ್ಥ್ಯವಿದೆ. ದೇಶೀಯ ಕ್ರಿಕೆಟ್‌ನಲ್ಲಿ, ಏಕದಿನ (ODI) ಮತ್ತು ನಾಲ್ಕು ದಿನಗಳ ಕಾಲ ನಡೆಯುವ ಟೆಸ್ಟ್​ ಸರಣಿ ಸೇರಿದಂತೆ ಮೂರೂ ಸ್ವರೂಪಗಳಲ್ಲಿಯೂ ಆಡುವುದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಒಂದೇ ಫಾರ್ಮೆಟ್​ ಆಟಗಾರನಲ್ಲ!

"ಇಂದಿಗೂ ಕೆಲವರು ನನ್ನನ್ನು ಕೇವಲ ಒಂದು ಫಾರ್ಮೆಟ್​ಗೆ ಮಾತ್ರ ರಿಂಕು ಸೀಮಿತ ಎಂದು ಭಾವಿಸುತ್ತಾರೆ. ದೇಶೀಯ ಕ್ರಿಕೆಟ್‌ನಲ್ಲಿನ ನನ್ನ ಏಕದಿನ ಮತ್ತು ನಾಲ್ಕು ದಿನಗಳ ಪಂದ್ಯಗಳ ಸರಾಸರಿಯನ್ನು ಒಮ್ಮೆ ನೋಡಿ. ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಕನಸು. ಹೀಗಾಗಿ, ನನ್ನನ್ನು ಕೇವಲ ಒಂದು ಸ್ವರೂಪದ ಆಟಗಾರನಾಗಿ ನೋಡಬಾರದು. ನಾನು ಮೂರೂ ಸ್ವರೂಪಗಳಲ್ಲಿ ಆಡುವ ಕ್ರಿಕೆಟಿಗ. ದೇಶೀಯ ಕ್ರಿಕೆಟ್‌ನಲ್ಲಿ ನಾನು ಮೂರೂ ಸ್ವರೂಪಗಳಲ್ಲಿ ಆಡುತ್ತೇನೆ. ಸದ್ಯಕ್ಕೆ, ನಾನು ಭಾರತಕ್ಕಾಗಿ ಕೇವಲ ಒಂದು ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಇಡೀ ದೇಶದ ಆಸೆ

ಇನ್ನು, ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿದ ರಿಂಕು ಸಿಂಗ್, "ವಿರಾಟ್ ಮತ್ತು ರೋಹಿತ್ ಇಬ್ಬರೂ ದಿಗ್ಗಜರು. ಅವರು ವಿಶ್ವಕಪ್‌ನಲ್ಲಿ ಆಡಬೇಕು ಮತ್ತು ವಿಶ್ವಕಪ್ ಗೆಲ್ಲುವ ತಂಡದ ಭಾಗವಾಗಬೇಕು ಎಂಬುದು ಕೇವಲ ನನ್ನ ಆಸೆಯಲ್ಲ. ಇಡೀ ದೇಶದ ಆಶಯವೂ ಹೌದು" ಎಂದರು.

ಯಾರಿಗೆ ಗೊತ್ತು? ಬಹುಶಃ ಅದೇ ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಹೀಗಾಗಿ, ಅವರು ಆಡಿ ಗೆದ್ದರೆ, ಅದು ಅತ್ಯಂತ ವಿಶೇಷವಾದ ಕ್ಷಣವಾಗಿ ಉಳಿಯಲಿದೆ. ಅವರಿಬ್ಬರು ಗೆಲ್ಲುವ ತಂಡದಲ್ಲಿ ಇರಬೇಕು ಮತ್ತು ಆ ಟ್ರೋಫಿಯನ್ನು ಎತ್ತಿಹಿಡಿಯಬೇಕು ಎಂಬುದೇ ನಮ್ಮೆಲ್ಲರ ಆಸೆ. ಅದನ್ನೇ ಕ್ರಿಕೆಟ್​ ಪ್ರೇಮಿಗಳು ಕೂಡ ಬಯಸೋದು ಎಂದು ರಿಂಕು ಹೇಳಿದರು.

ರಿಂಕು ಟಿ20 ಇನ್ನಿಂಗ್ಸ್​

ರಿಂಕು ಸಿಂಗ್ ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ 48 ಟಿ20 ಪಂದ್ಯಗಳನ್ನು ಆಡಿದ್ದಾರೆ. 35 ಇನ್ನಿಂಗ್ಸ್‌ಗಳಲ್ಲಿ, ಅವರು 36.94 ಸರಾಸರಿ ಮತ್ತು 156.34 ಸ್ಟ್ರೈಕ್ ರೇಟ್‌ನೊಂದಿಗೆ 702 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಅವರು ಭಾರತವನ್ನು ಎರಡು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 55 ರನ್ ಕಲೆಹಾಕಿದ್ದಾರೆ.

Also Read
ನಿಮಗೆ ಪ್ರತಿದಿನ ನಿಂಬೆ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ...Lemon Water
Rinku Singh

ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ರಿಂಕು ಸಿಂಗ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 53 ಪಂದ್ಯಗಳ 76 ಇನ್ನಿಂಗ್ಸ್‌ಗಳಲ್ಲಿ, ಅವರು 58.70 ಸರಾಸರಿಯೊಂದಿಗೆ 3,757 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕ ಮತ್ತು 23 ಅರ್ಧಶತಕಗಳು ಸೇರಿವೆ. ಅವರು ಲಿಸ್ಟ್-ಎ (List-A) ಕ್ರಿಕೆಟ್‌ನಲ್ಲಿ 70 ಪಂದ್ಯಗಳನ್ನು ಆಡಿದ್ದಾರೆ. 64 ಇನ್ನಿಂಗ್ಸ್‌ಗಳಲ್ಲಿ 52.56 ಸರಾಸರಿ ಮತ್ತು 101.17 ಸ್ಟ್ರೈಕ್ ರೇಟ್‌ನೊಂದಿಗೆ 2,418 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 21 ಅರ್ಧಶತಕಗಳು ಸೇರಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net