ಮೊದಲ ಪಂದ್ಯದಲ್ಲೇ ಗಾಯ; IPLನಲ್ಲಿ ಕೇನ್​ ವಿಲಿಯಮ್ಸನ್​​​ ಮುಂದುವರೆಯುವುದು ಡೌಟ್​

Kane-Williamson-1
Published on

ಅಹಮದಬಾದ್​: ಶುಕ್ರವಾರ ಗುಜರಾತ್​ ಟೈಟಾನ್ಸ್​-ಚೆನೈ ಸೂಪರ್​ ಕಿಂಗ್ಸ್​ ನಡುವೆ ನಡೆದ IPL ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಸೀಮಿತ ಓವರ್​ಗಳ ನಾಯಕ ಕೇನ್​ ವಿಲಿಯಮ್ಸನ್ ಗಾಯಗೊಂಡಿದ್ದಾರೆ.

ಪಂದ್ಯದ 13ನೇ ಓವರ್​ ವೇಳೆ ಮಿಡ್​ ವಿಕೆಟ್​ ಬೌಂಡರಿಯಲ್ಲಿ ಫೀಲ್ಡಿಂಗ್​​ ಮಾಡುವ ವೇಳೆ ಚೆನೈ ತಂಡದ ಆರಂಭಿಕ ಋತುರಾಜ್​ ಗಾಯಕ್ವಾಡ್​​ ಬಾರಿಸಿದ ಚೆಂಡನ್ನು ಕ್ಯಾಚ್​ ಹಿಡಿಯುವ ವೇಳೆ ಮೊಣಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೇನ್​ ವಿಲಿಯಮ್ಸನ್​ ಬದಲಿಗೆ ಸಾಯಿ ಸುದರ್ಶನ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿಸಲಾಯಿತು.

ಕೇನ್​ ವಿಲಿಯಮ್ಸನ್​ ಗಾಯದ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್​ ಟೈಟಾನ್ಸ್​ ತಂಢದ ನಾಯಕ ಹಾರ್ದಿಕ್​ ಪಾಂಡ್ಯ ಅವರನ್ನು ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿದ್ದು ಗಾಯದ ತೀವ್ರತೆ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕೆಂಬುದರ ಬಗ್ಗೆ ನಮಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ಧಾರೆ.

ಒಂದು ವೇಳೆ ಕೇನ್​ ವಿಲಿಯಮ್ಸನ್​ IPLಗೆ ಅಲಭ್ಯರಾದರೆ ಬದಲಿ ಆಟಗಾರರಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್​​ಮ್ಯಾನ್​ ಸ್ಟವೀವ್​ ಸ್ಮಿತ್​ ಅಥವಾ ಶ್ರೀಲಂಕಾದ ದಸುನ್​ ಶನಕಾ ಅವರತ್ತ ಗುಜರಾತ್​ ತಂಡ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net