

ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್ ಪ್ರಸ್ತುತ ಐಪಿಎಲ್ 2024 ರ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನ ತೋರುತ್ತಿದ್ದಾರೆ. ಪ್ರತೀ ಬಾರಿ ತನ್ನ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುವ ಶುಭ್ ಮನ್ ಈಗ ಸಾರಾ ಜೊತೆ ಬ್ರೇಕಪ್ ಬಳಿಕ ಇದೀಗ ಕಿರುತೆರೆ ನಟಿಯೊಬ್ಬರನ್ನ ಡೇಟ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಹರಡಿತ್ತು. ಇಬ್ಬರೂ ಸಾಕಷ್ಟು ಕಡೆ ಒಟ್ಟಿಗೇ ಕಾಣಿಸಿಕೊಂಡಿದ್ದರು.
ಆದರೆ ಇದೀಗ ಕಿರುತೆರೆ ನಟಿ ರಿಧಿಮಾ ಪಂಡಿತ್ ಹಾಗೂ ಟೀಂ ಇಂಡಿಯಾ ಆಟಗಾರ ಶುಭ್‌ಮನ್ ಗಿಲ್ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿದೆ.
2024ರ ಡಿಸೆಂಬರ್ನಲ್ಲಿ ಇವರ ಮದುವೆ ನಡೆಯಲಿದೆ ಎಂದು ಕೂಡ ಹೇಳಲಾಗಿತ್ತು. ಅಚ್ಚರಿ ಎಂದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ 9 ವರ್ಷ. ರಿಧಿಮಾಗೆ 33 ವರ್ಷ. ಶುಭ್ಮನ್ಗೆ 24 ವರ್ಷ. ಈ ಮದುವೆ ವದಂತಿಗೆ ರಿಧಿಮಾ ಅವರೇ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದಿದ್ದಾರೆ.
ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿರುವ ರಿಧಿಮಾ, ಬಣ್ಣದ ಲೋಕಕ್ಕೆ ಬಂದು 8 ವರ್ಷಗಳು ಕಳೆದಿವೆ. ‘ಬಹು ಹಮಾರಿ ರಜ್ನಿ ಕಾಂತ್’ ಅವರ ನಟನೆಯ ಮೊದಲ ಧಾರಾವಾಹಿ. ರಿಧಿಮಾಗೆ 33 ವರ್ಷ ವಯಸ್ಸು. ಅವರು ಶುಭ್‌ಮನ್ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.
‘ನಾನು ಮುಂಜಾನೆ ಎದ್ದೆ. ನನಗೆ ಪತ್ರಕರ್ತರಿಂದ ಹಲವು ಫೋನ್ಕಾಲ್ಗಳು ಬಂದವು. ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಒಂದೊಮ್ಮೆ ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದುದ್ದು ಘಟಿಸುತ್ತಿದೆ ಎಂದಾದರೆ ನಾನೇ ಬಂದು ಘೋಷಣೆ ಮಾಡುತ್ತೇನೆ. ಈಗ ಹರಿದಾಡುತ್ತಿರುವುದರಲ್ಲಿ ಯಾವುದೇ ನಿಜವಿಲ್ಲ’ ಎಂದಿದ್ದಾರೆ ರಿಧಿಮಾ