ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಸಂಭಾವ್ಯ ತಂಡ ಆಯ್ಕೆ: ನಿವೃತ್ತಿಯಿಂದ ಯು-ಟರ್ನ್ ಪಡೆದ ಸ್ಟಾರ್ ಆಲ್ರೌಂಡರ್

jj
Published on

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ ನಿವೃತ್ತಿಯಿಂದ ಯು-ಟರ್ನ್ ಪಡೆದಿದ್ದು, ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಹಾಗೂ ಮುಂಬರುವ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ವೇಗಿ ಜ್ರೋಾ ಆರ್ಚರ್ ಹಾಗೂ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು ವಿಶ್ವಕಪ್ ಸಂಭಾವ್ಯ ತಂಡದಿಂದ ಕೈಬಿಡಲಾಗಿದೆ.

ಆಗಸ್ಟ್ 30ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 4 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಸ್ಟೋಕ್ಸ್ ನಿವೃತ್ತಿಯಿಂದ ಹಿಂದೆ ಸರಿದಿರುವುದರಿಂದ ಇಂಗ್ಲೆಂಡ್ ತಂಡಕ್ಕೆ ಉತ್ತಮ ನಾಯಕತ್ವ ಗುಣ ಹೊಂದಿರುವ ಆಟಗಾರನ ಜತೆಗೆ ಮ್ಯಾಚ್ ವಿನ್ನರ್ ಸಹ ದೊರೆತಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದರೂ ಸಂಪೂರ್ಣ ಫಿಟ್ನೆಸ್ ಪಡೆಯುವಲ್ಲಿ ವಿಲವಾಗಿರುವ ವೇಗಿ ಜ್ರೋಾ ಆರ್ಚರ್, ವಿಶ್ವಕಪ್ ತಂಡದ ಮೀಸಲು ಆಟಗಾರನಾಗಿ ಭಾರತಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದು ಇಂಗ್ಲೆಂಡ್ ಆಯ್ಕೆ ಸಮಿತಿ ಮುಖ್ಯಸ್ಥ ಲೂಕ್ ರೈಟ್ ತಿಳಿಸಿದ್ದಾರೆ.

ವಿಶ್ವಕಪ್ ಟೂರ್ನಿಗೆ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಕೈ ಬಿಟ್ಟಿರುವುದು ಕಠಿಣ ನಿರ್ಧಾರ. ಸಮತೋಲನದಿಂದ ಕೂಡಿರುವ 15 ಆಟಗಾರರ ತಂಡದಲ್ಲಿ ಎಲ್ಲರಿಗೂ ಅವಕಾಶ ನೀಡುವುದು ಕಷ್ಟ ಎಂದಿದ್ದಾರೆ. 2022ರ ಜುಲೈನಲ್ಲಿ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ೋಷಿಸಿದ್ದರು. ಆಶಸ್ ಸರಣಿಯ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವುದರಿಂದ ಸ್ಟೋಕ್ಸ್ ಬೌಲಿಂಗ್ ನಡೆಸುವುದು ಅನುಮಾನ ಎನ್ನಲಾಗಿದೆ. ಟಿ20 ತಂಡದಲ್ಲಿ ಜೋಶ್ ಟಂಗ್, ಜಾನ್ ಟರ್ನರ್ ಹಾಗೂ ಗಸ್ ಅಟಕಿಸನ್ ಮೂವರು ಆಟಗಾರರಿಗೆ ಮೊದಲ ರಾಷ್ಟ್ರೀಯ ಕರೆ ಎನಿಸಿದೆ.

ಸಂಭಾವ್ಯ ತಂಡ: ಜೋಸ್ ಬಟ್ಲರ್ (ನಾಯಕ, ವಿ.ಕೀ), ಮೊಯಿನ್ ಅಲಿ, ಗಸ್ ಅಟಕಿಸನ್, ಜಾನಿ ಬೆರ್ ಸ್ಟೋ, ಸ್ಯಾಮ್ ಕರ‌್ರನ್, ಲಿಯಾಮ್ ಲಿವಿಂಗ್ ಸ್ಟೋನ್, ಡೇವಿಡ್ ಮಲನ್, ಆದೀಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸೆ ಟಾಪ್ಲೆ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net