ದಕ್ಷಿಣ ವಲಯ ಈಜು ಚಾಂಪಿಯನ್​ಷಿಪ್​: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ವಲಯ ಈಜು ಚಾಂಪಿಯನ್​ಷಿಪ್​: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
ದಕ್ಷಿಣ ವಲಯ ಈಜು ಚಾಂಪಿಯನ್​ಷಿಪ್​: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
Published on
ಬೆಂಗಳೂರು: ಕರ್ನಾಟಕ ತಂಡ ತೆಲಂಗಾಣದ ಹೈದರಾಬಾದ್​ನಲ್ಲಿ ಸೋಮವಾರ ಮುಕ್ತಾಯಗೊಂಡ 36ನೇ ದಣ ವಲಯ ಈಜು ಚಾಂಪಿಯನ್​ಷಿಪ್​ನಲ್ಲಿ (36th South zone aquatic championship 2025) ಅಮೋಘ ನಿರ್ವಹಣೆ ಪ್ರದರ್ಶಿಸುವ ಮೂಲಕ ಸಮಗ್ರ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ಮೂರು ದಿನಗಳ ಕಾಲ ನಡೆದ ಕೂಟದಲ್ಲಿ ಕರ್ನಾಟಕ ತಂಡ ಒಟ್ಟು 1,022 ಅಂಕಗಳನ್ನು ಕಲೆಹಾಕುವ ಮೂಲಕ ಅಗ್ರಸ್ಥಾನ ಅಲಂಕರಿಸಿತು. ಆತಿಥೇಯ ತೆಲಂಗಾಣ ತಂಡ 425 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ತಮಿಳುನಾಡು ತಂಡ 414 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯಿತು.

ಕೊನೇ ದಿನ ನಡೆದ ಸ್ಪರ್ಧೆಗಳಲ್ಲಿ ಕರ್ನಾಟಕದ ಶ್ರೇಯಸ್​ ಸುನೀಲ್​, ಇದಿಕಾ ಭಟ್​, ಅದಿತಿ ವಿನಾಯಕ್​, ಸ್ವರೂಪ್​ ಧನುಚೆ, ನಯನಾ ಎ. ಮಧ್ಯಸ್ಥ, ಲೋಹಿತಾಶ್ವ ನಾಗೇಶ್​, ತನ್ಮಯಿ ಧಮೇರ್ಶ್​, ವೇದಾಂತ್​ ವಿ. ಮಧೀರ, ಎಸ್​. ಕ್ರಿಷ್​, ಆದ್ಯಾ ಭಾರಾಧ್ವಾಜ್​, ಆರವ್​ ಜೆ. ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು.

ವಾಟರ್​ಪೊಲೋದಲ್ಲಿ ಅವಳಿ ರಜತ: ಕರ್ನಾಟಕ ತಂಡ ಕೂಟದ ವಾಟರ್​ಪೊಲೊ ಸ್ಪರ್ಧೆಯಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟಿತು. ಬಾಲಕರ ವಿಭಾಗದ ಫೈನಲ್​ನಲ್ಲಿ ಕೇರಳ ವಿರುದ್ಧ 6-12ರಿಂದ ಪರಾಭವಗೊಂಡರೆ, ಬಾಲಕಿಯರ ವಿಭಾಗದಲ್ಲೂ ಕೇರಳ ಎದುರು 8-11ರಿಂದ ಸೋಲು ಅನುಭವಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net