ಭಾರತ ಫುಟ್‌ಬಾಲ್ ತಂಡದ ಕಿಟ್ ಪ್ರಾಯೋಜಕತ್ವ ಪಡೆದ ಪರ್ಫಾರ್ಮ್ಯಾಕ್ಸ್

New-Project-35
Published on

ಮುಂಬೈ: ಫ್ಯಾಷನ್ ಮತ್ತು ಜೀವನಶೈಲಿಯ ಪ್ರತೀಕವಾಗಿರುವ ಉನ್ನತ-ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ ‘ಪರ್ಫಾರ್ಮ್ಯಾಕ್ಸ್’, ಭಾರತೀಯ ಫುಟ್‌ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನೊಂದಿಗೆ (ಎಐಎಫ್‌ಎಫ್) ಒಪ್ಪಂದ ಮಾಡಿಕೊಂಡಿದೆ.

ಥಾಯ್ಲೆಂಡ್‌ನಲ್ಲಿ ನಡೆಯಲಿರುವ 49ನೇ ಕಿಂಗ್ಸ್ ಕಪ್ ಟೂರ್ನಿಯಲ್ಲಿ ಬ್ಲೂ ಟೈಗರ್ಸ್‌ ಖ್ಯಾತಿಯ ಭಾರತ ಫುಟ್‌ಬಾಲ್ತಂಡ ಈ ಹೊಸ ಕಿಟ್‌ನೊಂದಿಗೆ ಮೊದಲ ಬಾರಿಗೆ ಕಣಕ್ಕಿಳಿಯಲಿದೆ. ಇರಾಕ್ ತಂಡವನ್ನು ಎದುರಿಸುವ ಮೂಲಕ ಭಾರತ ತನ್ನ ಆರಂಭಿಸಿದೆ.

ನಮ್ಮ ಹೊಸ ಕಿಟ್ ಪಾಲುದಾರರಾದ ಪರ್ಫಾರ್ಮ್ಯಾಕ್ಸ್‌ಗೆ ಫುಟ್‌ಬಾಲ್ ಕುಟುಂಬಕ್ಕೆ ಸ್ವಾಗತ ಕೋರುತ್ತೇವೆ. ಆಟಗಾರರು ಮತ್ತು ತಂಡಗಳು ಹೊಸ ಕಿಟ್ ಅನ್ನು ಇಷ್ಟಪಡುತ್ತಾರೆ. ಮತ್ತು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸ್ಫೂರ್ತಿ ಪಡೆಯುತ್ತಾರೆ ಎಂಬ ವಿಶ್ವಾಸವಿದೆ. ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಡಾ. ಶಾಜಿ ಪ್ರಭಾಕರನ್ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ, ಕುಸ್ತಿಪಟು ರವಿ ದಹಿಯಾ, ಹರ್ಮಾನ್ ಪ್ರೀತ್ ಕೌರ್, ಮನು ಭಾಕರ್, ರಿಧಿ ಫೋರ್, ಯೋಗೇಶ್ ಕಥುನಿಯಾ ಮತ್ತು ಪ್ರಮೋದ್ ಭಗತ್ ಅವರಂಥ ಹಲವಾರು ಕ್ರೀಡಾಪಟುಗಳೊಂದಿಗೆ ಪರ್ಫಾರ್ಮ್ಯಾಕ್ಸೃ್ ಪಾಲುದಾರಿಕೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net