ನೀತಾ ಅಂಬಾನಿ ಸಾರಥ್ಯದ ರಿಲಯನ್ಸ್ ಫೌಂಡೇಶನ್‌ಗೆ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ಸ್​​ ಗೌರವ

ನೀತಾ ಅಂಬಾನಿ ಸಾರಥ್ಯದ ರಿಲಯನ್ಸ್ ಫೌಂಡೇಶನ್‌ಗೆ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ಸ್​​ ಗೌರವ
ನೀತಾ ಅಂಬಾನಿ ಸಾರಥ್ಯದ ರಿಲಯನ್ಸ್ ಫೌಂಡೇಶನ್‌ಗೆ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ಸ್​​ ಗೌರವ
Published on

ಪ್ರಮುಖ ಮುಖ್ಯಾಂಶಗಳು

  • 2036ರ ಒಲಿಂಪಿಕ್ಸ್ ಭಾರತದ ಕನಸು ಎಂದ ನೀತಾ ಅಂಬಾನಿ
  • ಭಾರತ ವಿಶ್ವದ ಬಹು ಕ್ರೀಡಾ ಶಕ್ತಿ ಕೇಂದ್ರವಾಗಲಿದೆ: ನೀತಾ ಅಂಬಾನಿ
  • ರಿಲಯನ್ಸ್ ಫೌಂಡೇಶನ್ 2 ಕೋಟಿ 30 ಲಕ್ಷ ಯುವಕರ ಜೀವನವನ್ನು ತಲುಪಿದೆ
ನವದೆಹಲಿ: ಎಫ್ಐಸಿಸಿಐನ 15ನೇ ಜಾಗತಿಕ ಕ್ರೀಡಾ ಶೃಂಗಸಭೆ 'ಟರ್ಫ್ 2025' ಮತ್ತು 'ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ಸ್ 2025'ರಲ್ಲಿ ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ "ರಿಲಯನ್ಸ್​ ಫೌಂಡೇಶನ್" (reliance-Foundation)ಅನ್ನು ಗೌರವಿಸಲಾಯಿತು. ನೀತಾ ಅಂಬಾನಿ ಅವರ ನಾಯಕತ್ವದಲ್ಲಿ, ರಿಲಯನ್ಸ್ ಫೌಂಡೇಶನ್ ತಳಮಟ್ಟದಿಂದ ಉನ್ನತ ಕಾರ್ಯಕ್ಷಮತೆಯವರೆಗೆ ಕ್ರೀಡೆಯನ್ನು ಸಶಕ್ತಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಿದೆ. ಕ್ರೀಡಾಕ್ಷೇತ್ರದಲ್ಲಿ ನೀತಾ ಅಂಬಾನಿ ಅವರ ನಾಯಕತ್ವದಿಂದಾಗಿ, ಅವರನ್ನು ದೇಶದ ಉದಯೋನ್ಮುಖ 'ಭಾರತದ ಕ್ರೀಡಾ ನಾಯಕಿ' ಎಂದೂ ನೋಡಲಾಗುತ್ತದೆ.

ರಿಲಯನ್ಸ್ ಫೌಂಡೇಶನ್‌ಗೆ 'ಕ್ರೀಡೆಯನ್ನು ಉತ್ತೇಜಿಸುವ ಅತ್ಯುತ್ತಮ ಕಾರ್ಪೊರೇಟ್ - ಉನ್ನತ ಕಾರ್ಯಕ್ಷಮತೆ' ಪ್ರಶಸ್ತಿಯನ್ನು ನೀಡಿದ ಎಫ್ಐಸಿಸಿಐ,"ಈ ಪ್ರಶಸ್ತಿಯನ್ನು ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಅಂಬಾನಿ ಅವರ ದೂರದೃಷ್ಟಿಯ ಚಿಂತನೆ ಮತ್ತು ನಾಯಕತ್ವಕ್ಕಾಗಿ ನೀಡಲಾಗುತ್ತಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯರಾದ ನೀತಾ ಅಂಬಾನಿ, ವಿಶ್ವದಾದ್ಯಂತ ಒಲಿಂಪಿಕ್ಸ್ ಚಳುವಳಿಯನ್ನು ಬಲಪಡಿಸುವಲ್ಲಿ ಮತ್ತು ಭಾರತದ ಕ್ರೀಡಾ ನಿರೀಕ್ಷೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ, ರಿಲಯನ್ಸ್ ಫೌಂಡೇಶನ್‌ ತಳಮಟ್ಟದ ಕಾರ್ಯಕ್ರಮಗಳಿಂದ ಹಿಡಿದು ಗಣ್ಯ ಕ್ರೀಡಾಪಟುಗಳ ಅಭಿವೃದ್ಧಿಯವರೆಗೆ ಹಲವಾರು ಪರಿವರ್ತನಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.

ನೀತಾ ಅಂಬಾನಿ ಈ ಪ್ರಶಸ್ತಿಯನ್ನು ರಿಲಯನ್ಸ್ ಫೌಂಡೇಶನ್‌ ಕುಟುಂಬ ಮತ್ತು ದೇಶದ ಯುವ ಆಟಗಾರರಿಗೆ ಅರ್ಪಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಅವರು,"ಮುಂಬರುವ ದಶಕವು ಭಾರತೀಯ ಕ್ರೀಡೆಯ ಸುವರ್ಣ ದಶಕವಾಗಲಿದೆ. ಭಾರತವನ್ನು ಜಾಗತಿಕ ಬಹು-ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವ ಸಮಯ ಬಂದಿದೆ. ಭಾರತವು 2036 ರ ಒಲಿಂಪಿಕ್ಸ್​ ಕ್ರೀಡಾಕೂಟದ ಆತಿಥ್ಯ ವಹಿಸಬೇಕು ಎಂಬುದು 1.4 ಶತಕೋಟಿ ಭಾರತೀಯರ ಕನಸಾಗಿದೆ ಮತ್ತು ರಿಲಯನ್ಸ್ ಫೌಂಡೇಶನ್‌ ಈ ಕನಸನ್ನು ನನಸಾಗಿಸಲು ಬದ್ಧವಾಗಿದೆ” ಎಂದರು.

ರಿಲಯನ್ಸ್ ಫೌಂಡೇಶನ್‌ನ ಕ್ರೀಡಾ ಉಪಕ್ರಮಗಳು ಇಲ್ಲಿಯವರೆಗೆ ದೇಶಾದ್ಯಂತ 2 ಕೋಟಿ 30
ಲಕ್ಷಕ್ಕೂ ಹೆಚ್ಚು ಯುವಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ ಎಂದು ನೀತಾ ಅಂಬಾನಿ ಹೇಳಿದರು. ಅದು ಶಾಲಾ ಮಟ್ಟವಾಗಿರಲಿ, ತಳಮಟ್ಟದಲ್ಲಿರಲಿ ಅಥವಾ ಉನ್ನತ ಕಾರ್ಯಕ್ಷಮತೆಯ ತರಬೇತಿ ಕೇಂದ್ರಗಳಾಗಿರಲಿ, ಎಲ್ಲೆಡೆ ಯುವಕರು ಕ್ರೀಡೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮ ಯುವಕರು ಗೆದ್ದಾಗ, ದೇಶ ಹಿರಿಮೆ ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಚ್ಚುತ್ತದೆ ಎಂದರು.

ಮಹಿಳಾ ಕ್ರೀಡಾಪಟುಗಳ ನಿರಂತರ ಯಶಸ್ಸಿನ ಬಗ್ಗೆ ಮಾತನಾಡಿದ ನೀತಾ ಅಂಬಾನಿ, "ಜೀವನವನ್ನು ಬದಲಾಯಿಸುವ, ಸಮಾಜವನ್ನು ಸಂಪರ್ಕಿಸುವ ಮತ್ತು ರಾಷ್ಟ್ರವನ್ನು ಶಕ್ತಿಯುತಗೊಳಿಸುವ ವಿಶಿಷ್ಟ ಶಕ್ತಿ ಕ್ರೀಡೆಗೆ ಇದೆ. ಭಾರತದ ಕ್ರೀಡಾ ಮನೋಭಾವವು ಹಳ್ಳಿಯ ಮೈದಾನದಿಂದ ಜಾಗತಿಕ ವೇದಿಕೆಗಳಿಗೆ ಜಾಗೃತವಾಗಿದೆ. ನಮ್ಮ ಹೆಣ್ಣುಮಕ್ಕಳು ನಿರಂತರವಾಗಿ ತ್ರಿವರ್ಣ ಧ್ವಜವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ” ಎಂದರು.

ನೀತಿ ನಿರೂಪಕರು, ಉದ್ಯಮದ ನಾಯಕರು, ಕ್ರೀಡಾಪಟುಗಳು ಮತ್ತು ಕ್ರೀಡಾ ನವೋದ್ಯಮಿಗಳು ಭಾರತದ ಕ್ರೀಡಾ ಭವಿಷ್ಯದ ಬಗ್ಗೆ ಚರ್ಚಿಸಲು ಶೃಂಗ ಸಭೆಯಲ್ಲಿ ಒಗ್ಗೂಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net