

ಡೆಹ್ರಾಡೂನ್: ರಿಲಯನ್ಸ್ ಫೌಂಡೇಶನ್‌ನಿಂದ ಬೆಂಬಲ ಪಡೆಯುತ್ತಿರುವ 50ಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ 38ನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಫೌಂಡೇಶನ್‌ನ ಕ್ರೀಡಾಪಟುಗಳು ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಜೂಡೋ, ವೇಟ್‌ಲಿಫ್ಟಿಂಗ್, ಕುಸ್ತಿ ಮತ್ತು ಟೇಬಲ್ ಟೆನಿಸ್ ಸೇರಿದಂತೆ ಎಂಟು ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರವರಿ 14ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಹಲವು ರಾಷ್ಟ್ರೀಯ ದಾಖಲೆಗಳು ಮುರಿಯುವ ನಿರೀಕ್ಷೆಯಿದೆ. ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.
ರಿಲಯನ್ಸ್ ಫೌಂಡೇಶನ್‌ಗೆ ಸೇರಿದ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೊದಲ ಬಾರಿಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಜೂಡೋದ ಉದಯೋನ್ಮುಖ ಆಟಗಾರ್ತಿ ಹಿಮಾಂಶಿ ಟೋಕಾಸ್ ಕೂಡ ಪದಕದ ರೇಸ್‌ನಲ್ಲಿದ್ದಾರೆ. ಅವರು ಇತ್ತೀಚೆಗೆ ಆಫ್ರಿಕನ್ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದರು. ವಿಶ್ವ ಜೂನಿಯರ್ ಶ್ರೇಯಾಂಕದಲ್ಲಿ ಅವರು ಅಗ್ರ 5 ತಲುಪಿದ್ದಾರೆ.
ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್), ತೇಜಸ್ ಶಿರ್ಸೆ (110 ಮೀ ಹರ್ಡಲ್ಸ್), ಕರ್ನಾಟಕದ ಮಣಿಕಂಠ ಹೋಬಳಿಧರ್ (100 ಮೀ), ಅಮ್ಲಾನ್ ಬೋರ್ಗೊಹೈನ್ (200 ಮೀ) ಮತ್ತು ರೋಸಿ ಮೀನಾ ಪೌಲ್ರಾಜ್ (ಪೋಲ್ ವಾಲ್ಟ್) ಸೇರಿದಂತೆ ರಿಲಯನ್ಸ್ ಫೌಂಡೇಶನ್‌ನ ಹಲವಾರು ರಾಷ್ಟ್ರೀಯ ದಾಖಲೆ ಹೊಂದಿರುವವರು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಉದಯೋನ್ಮುಖ ತಾರೆಯರಾದ ಅನಿಮೇಶ್ ಕುಜೂರ್ (2024 ರಲ್ಲಿ ಭಾರತದ ವೇಗದ ಓಟಗಾರ), ಡಿಎಂ ಜಯರಾಮ್, ಬಾಪಿ ಹಂಸದಾ ಮತ್ತು ಸಾಕ್ಷಿ ಚವ್ಹಾಣ್ ಅವರ ಪ್ರದರ್ಶನವೂ ಗಮನ ಸೆಳೆಯುವ ನಿರೀಕ್ಷೆ ಇದೆ.
“ನಾವು ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆ ನಿಜವಾಗಿಯೂ ಉತ್ಸುಕರಾಗಿದ್ದೇವೆ. ನಮ್ಮ ಅಥ್ಲೀಟ್‌ಗಳು ತಮ್ಮ ಫಿಟ್‌ನೆಸ್ ಅನ್ನು ಪರಿಶೀಲಿಸಲು ಮತ್ತು ಅವರು ಎಷ್ಟು ಚೆನ್ನಾಗಿ ತರಬೇತಿ ಪಡೆದಿದ್ದಾರೆ ಎಂಬುದನ್ನು ನಿರ್ಣಯಿಸಲು ಇದು ಒಂದು ಅವಕಾಶವಾಗಿದೆ. ನಮ್ಮ ಹೆಚ್ಚಿನ ಕ್ರೀಡಾಪಟುಗಳು 2025ರಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ಗೆ ತಯಾರಿ ನಡೆಸುತ್ತಿರುವುದರಿಂದ ಇದು ನಮಗೆ ಬಹಳ ಮುಖ್ಯವಾದ ವರ್ಷವಾಗಿದೆ" ಎಂದು ರಿಲಯನ್ಸ್ ಫೌಂಡೇಶನ್‌ನ ಅಥ್ಲೆಟಿಕ್ಸ್ ನಿರ್ದೇಶಕ ಜೇಮ್ಸ್ ಹಿಲಿಯರ್ ಹೇಳಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ಅನುಪಮಾ ಉಪಾಧ್ಯಾಯ, ಉನ್ನತಿ ಹೂಡಾ ಮತ್ತು ಶ್ರೀಯಾನ್ಶಿ ವಲಿಶೆಟ್ಟಿ ಮೂವರು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಟೇಬಲ್ ಟೆನಿಸ್ ದಿಗ್ಗಜ ಜಿ ಸತ್ಯನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಶೂಟಿಂಗ್‌ನಲ್ಲಿ ಡಬಲ್ ಏಷ್ಯನ್ ಗೇಮ್ಸ್ ಪದಕ ವಿಜೇತ ಪಾಲಕ್ ಗುಲಿಯಾ (10 ಮೀ ಏರ್ ಪಿಸ್ತೂಲ್) ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ಆಶಿ ಚೌಕ್ಸೆ (10 ಮೀ ಏರ್ ರೈಫಲ್ ಮತ್ತು 50 ಮೀ ರೈಫಲ್ 3 ಸ್ಥಾನ) ಪದಕಗಳ ರೇಸ್‌ನಲ್ಲಿದ್ದಾರೆ.