

ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ 20 ಮತ್ತು ಏಕದಿನ ಪಂದ್ಯಗಳಿಗೆ ಘೋಷಿಸಲಾದ ಭಾರತ ತಂಡದ ವಿರುದ್ಧ ಅನೇಕರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ಅದ್ಭುತ ಪ್ರದರ್ಶನ ನೀಡುತ್ತಿರುವ ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ ಅವರಂತಹ ಆಟಗಾರರನ್ನು ಬಿಟ್ಟು ತಂಡದಲ್ಲಿ ಕೆಲವರು ಅನಿರೀಕ್ಷಿತವಾಗಿ ಸ್ಥಾನವನ್ನು ಪಡೆದಿದ್ದಾರೆ. ಆಯ್ಕೆಗಾರರ ವಿರುದ್ಧ ಬಹಿರಂಗವಾಗಿ ಆಟಗಾರರೇ ಕಿಡಿ ಕಾರುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ಮಾಜಿ ಬ್ಯಾಟ್ಸ್ಮನ್ ಎಸ್. ಬದರಿನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ನಮ್ಮ ಮಂತ್ರಿಗಳೆಲ್ಲ ಡಿಸಿಎಂಗಳೇ’: ಉದಯನಿಧಿ ಸ್ಟಾಲಿನ್
ರುತುರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆಯ್ಕೆ ಸಮಿತಿ ಅವರನ್ನು ಪಕ್ಕಕ್ಕೆ ಇಟ್ಟಿದ್ದಕ್ಕೆ ಬದರಿನಾಥ್ ಕೆಂಡಾಮಂಡಲರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಪಂದ್ಯಗಳಿಗೆ ರುತುರಾಜ್ ಅವರನ್ನು ಆಯ್ಕೆ ಮಾಡದಿರುವುದು ಆಘಾತ ತಂದಿದೆ ಎಂದು ಅವರು ಹೇಳಿದ್ದಾರೆ.
ಆಟಗಾರರಿಗೆ ಬ್ಯಾಡ್ ಬಾಯ್ ಇಮೇಜ್ ಇದ್ದರೆ ಮಾತ್ರ ಟೀಮ್ ಇಂಡಿಯಾಗೆ ಆಯ್ಕೆಯಾಗುತ್ತಾರೆ ಎನಿಸುತ್ತಿದೆ. ತಂಡದಲ್ಲಿ ಸ್ಥಾನ ಪಡೆಯಲು ಬಯಸಿದರೆ ಬಾಲಿವುಡ್ ನಾಯಕಿಯರೊಂದಿಗೆ ಸಂಬಂಧವನ್ನು ಹೊಂದಿರಬೇಕಾ? ಪ್ರತಿಭಾವಂತ ಆಟಗಾರರು ತಂಡಕ್ಕೆ ಆಯ್ಕೆಯಾಗದೇ ಇರುವುದಕ್ಕೆ ಇದೇ ಕಾರಣವಿರಬಹುದು ಎಂದು ಬದರಿನಾಥ್ ವ್ಯಂಗ್ಯವಾಡಿದ್ದಾರೆ.
ತಂಡ ಪೂರ್ತಿಯಾಗಿ ಅಥವಾ ಉತ್ತಮ ಮಾಧ್ಯಮ ನಿರ್ವಾಹಕರನ್ನು ಹೊಂದಿರಬೇಕಾಗುತ್ತದೆ. ಆದರೆ ಈಗ ಪ್ರಕಟಿಸಿರುವ ತಂಡದಲ್ಲಿ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ತಂಡದಲ್ಲಿ ರುತೇಜ್ಗೆ ಸ್ಥಾನ ನೀಡಲಾಗಿಲ್ಲ. ಆ ಬಳಿಕ ರುತುರಾಜ್ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಅವರು ಎರಡು ಪಂದ್ಯಗಳಲ್ಲಿ 77 ಮತ್ತು 49 ರನ್ ಗಳಿಸುವ ಮೂಲಕ ಪ್ರಭಾವಿತರಾದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಶ್ರೀಲಂಕಾ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಕೂಡ ಸೈಡ್ ಲೈನ್ ಆಗಿರುವ ಟೀಕೆಗೆ ಗುರಿಯಾಗಿದ್ದಾರೆ. ಈ ಪ್ರವಾಸದಲ್ಲಿ ಅಷ್ಟಾಗಿ ಪ್ರಭಾವ ಬೀರದ ರಿಯಾನ್ ಪರಾಗ್ ಶ್ರೀಲಂಕಾ ಜೊತೆಗಿನ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿರುವುದು ಗಮನಾರ್ಹ.