

ಬೆಂಗಳೂರು: ರಾಷ್ಟ್ರೀಯ ಚಾಂಪಿಯನ್ ಶ್ರೀವಲ್ಲಿ ರಶ್ಮಿಕಾ ಭಮಿಡಿಪಟಿ ಬೆಂಗಳೂರು ಐಟಿಎ್ ಮಹಿಳೆಯರ ವರ್ಲ್ಡ್ ಟೆನಿಸ್ ಟೂರ್ ಟೂರ್ನಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ ಎನಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಐಟಿಎ್ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದ್ದಾರೆ.
ಬೌರಿಂಗ್ ಇನ್‌ಸಿಟ್ಯೂಟ್ ಆವರಣದಲ್ಲಿ ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ರಶ್ಮಿಕಾ 6-0, 4-6, 6-3 ಅಂತರದಿಂದ ದೇಶ ಭಾಂದವೆ ಝೀಲ್ ದೇಸಾಯಿ ಎದುರು ಗೆದ್ದು ಬೀಗಿದರು. ಮೊದಲ ಸೆಟ್‌ನಲ್ಲಿ ಝೀಲ್ ದೇಸಾಯಿ ಎಸಗಿದ ತಪ್ಪುಗಳಿಂದ 6-0ಯಿಂದ ವಶಪಡಿಸಿಕೊಂಡ ಶ್ರೀವಲ್ಲಿ, ಎರಡನೇ ಸೆಟ್‌ನಲ್ಲಿ 4-6 ಹಿನ್ನಡೆ ಕಂಡರು. ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 21 ವರ್ಷದ ರಶ್ಮಿಕಾ ಬಲಿಷ್ಠ ಮುಂಗೈ ಹೊಡೆತಗಳೊಂದಿಗೆ ಪ್ರಾಬಲ್ಯ ಸಾಧಿಸಿ 27 ವರ್ಷದ ಝೀಲ್ ದೇಸಾಯಿಯನ್ನು ಪರಾಭವಗೊಳಿಸಿದರು.
ಸೆಮೀಸ್‌ನಲ್ಲಿ ಮೂರನೇ ಶ್ರೇಯಾಂಕಿತೆ ಋತುಜಾ ಬೋಸಲೆಗೆ ಶಾಕ್ ನೀಡಿದ್ದ ಶ್ರೀವಲ್ಲಿ ರಶ್ಮಿಕಾ 3.28 ಲಕ್ಷ ರೂಪಾಯಿ ಬಹುಮಾನ ಮೊತ್ತ ಹಾಗೂ 50 ಡಬ್ಲುೃಟಿಎ ಅಂಕ ಸಂಪಾದಿಸಿದರೆ, ರನ್ನರ್ ಅಪ್ ಝೀಲ್ ದೇಸಾಯಿ 1.75 ಲಕ್ಷ ರೂಪಾಯಿ ಜತೆಗೆ 30 ಡಬ್ಲುೃಟಿಎ ಅಂಕ ಕಲೆಹಾಕಿದರು.