ಲಂಕಾ ಟಿ20 ವಿಶ್ವಕಪ್ ತಂಡಕ್ಕೆ ಆರ್‌ಸಿಬಿ ಮಾಜಿ ಆಲ್ರೌಂಡರ್ ನಾಯಕ

New-Project-2-5
Published on

ಕೊಲಂಬೊ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಮಥೀಶ ಪಥಿರಣ ಹಾಲಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದು, ಮುಂಬರುವ ಟಿ20 ವಿಶ್ವಕಪ್‌ಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಪಾದದ ಗಾಯದಿಂದ ಐಪಿಎಲ್‌ನಿಂದ ಹಿಂದೆ ಸರಿದ ಹಸರಂಗ ಪುನರಾಗಮನದೊಂದಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ದಿಲ್ಶಾನ್ ಮಧುಶಂಕ ಸಹ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ತಂಡ: ವಾನಿಂದು ಹಸರಂಗ(ನಾಯಕ), ಚರಿತ್ ಅಸಲಂಕಾ (ಉಪನಾಯಕ), ಕುಸಲ್ ಮೆಂಡಿಸ್, ಪಥುಮ್ ನಿಸ್ಸಂಕ, ಕಮಿಂದು ಮೆಂಡಿಸ್, ಸಧೀರ ಸಮರವಿಕ್ರಮ, ಮ್ಯಾಥ್ಯೂಸ್, ದಸುನ್ ಶನಕ, ಧನಂಜಯ ಡಿಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ದುಶ್ಮಂತ ಚಮೀರ, ನುವಾನ್ ತುಷಾರ, ಮಥೀಶ ಪಥಿರಣ, ದಿಲ್ಶಾನ್ ಮಧುಶಂಕ.

ಮೀಸಲು: ಆಸ್ಮಿತ್ ೆರ್ನಾಂಡೊ, ವಿಜಯ್‌ಕುಮಾರ್ ವಿಯಾಸ್‌ಕಾಂತ್, ಭಾನುಕ ರಾಜಪಕ್ಷ, ಜನಿತ್ ಲಿಯಾಂಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net