

ಬೆಂಗಳೂರು: ಐಪಿಎಲ್ನ 16 ಆವೃತ್ತಿ ಹಾಗೂ ವುಮೆನ್ಸ್ ಪ್ರಿಮೀಯರ್ ಲೀಗ್ನ (ಡಬ್ಲುಪಿಎಲ್) ಮೊದಲ ಆವೃತ್ತಿಯಲ್ಲಿ ಅಭಿಮಾನಿಗಳ ನಿರೀೆಗೆ ತಕ್ಕ ಪ್ರದರ್ಶನದೊಂದಿಗೆ ಟ್ರೋಫಿ ಜಯಿಸುವಲ್ಲಿ ವಿಫಲವಾಗಿರುವ ಆರ್ಸಿಬಿ ತಂಡ ತನ್ನ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಭಾರತ ಮಹಿಳಾ ತಂಡದ ಉಪನಾಯಕಿ ಸ್ಮ$ತಿ ಮಂದನಾ ಸಾರಥ್ಯ ಮಹಿಳಾ ಆರ್ಸಿಬಿ ತಂಡ ಡಬ್ಲುಪಿಎಲ್ 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಶನಿವಾರ ಯುಪಿ ವಾರಿಯರ್ಸ್ ತಂಡವನ್ನು ಎದುರಿಸುವ ಮೂಲಕ ತವರು ಚಿನ್ನಸ್ವಾಮಿ ಅಂಗಣದಲ್ಲಿ ಅಭಿಯಾನ ಆರಂಭಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ.
ಕಳೆದ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಸ್ಮ$ತಿ ಮಂದನಾ ಕೇವಲ 148 ರನ್ ಮಾತ್ರಗಳಿಸಿದರು. ಆದರೆ ಈ ಬಾರಿ ತವರು ಅಭಿಮಾನಿಗಳ ಎದುರು ಉತ್ತಮ ಪ್ರದರ್ಶನ ನೀಡುವ ಹಂಬಲದಲ್ಲಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ನೀಡಿದ ಪ್ರದರ್ಶನದಿಂದ ಭಾರತ ತಂಡಕ್ಕೆ ಭರವಸೆಯ ಆಲ್ರೌಂಡರ್ ಎನಿಸಿರುವ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಈ ಬಾರಿಯೂ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಬೌಲಿಂಗ್ನಲ್ಲಿ ರೇಣುಕಾ ಸಿಂಗ್ ಜತೆಯಾಗಿ ಕೇಟ್ ಕ್ರಾಸ್, ಏಕ್ತಾ ಬಿಷ್ತ್ ಬಲ ತುಂಬಲಿದ್ದಾರೆ.
ಚೊಚ್ಚಲ ಆವೃತ್ತಿಯಲ್ಲಿ ಎರಡು ತಂಡಗಳು ಅಂಕಪಟ್ಟಿಯ ಕೊನೆಯ ಎರಡು ಸ್ಥಾನ ಪಡೆದುಕೊಂಡಿದ್ದವು. ಯುಪಿ ವಾರಿಯರ್ಸ್ ಪರ ಪರ ಮಿನಿ ಹರಾಜಿನ ದುಬಾರಿ 2ನೇ ದುಬಾರಿ ಆಟಗಾರ್ತಿ ಕನ್ನಡತಿಯರಾದ ವೃಂದಾ ದಿನೇಶ್, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ, ನಾಯಕಿ ಅಲಿಸ್ಸಾ ಹೀಲಿ ಪ್ರ್ರಮುಖ ಆಟಗಾರ್ತಿಯರೆನಿಸಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.