ಈ ವರ್ಷ ಆರ್​ಸಿಬಿಗಿದೆ ಕಪ್​ ಗೆಲ್ಲುವ ಅದೃಷ್ಟ..! ಶುರುವಾಗಿದೆ ಬಣ್ಣದ ಲೆಕ್ಕಾಚಾರ ..!

RCB FAN PAGE FOR WEB
Published on

ಬೆಂಗಳೂರು: ಈ ಸಲ ಕಪ್​ ನಮ್ದೆ..!, ಗೆದ್ದರೂ ಸರಿ ಸೋತರೂ ಸರಿ ಆರ್​ಸಿಬಿನೇ ನಮ್ ಟೀಮ್ ಎನ್ನುವ ಅಭಿಮಾನಿಗಳಿಗೇನು ಕೊರತೆ ಇಲ್ಲ. ಪ್ರತಿ ವರ್ಷ ಐಪಿಎಲ್​ ಆರಂಭದಲ್ಲಿ ಶುರುವಾಗುವ ಈ ಟ್ರೆಂಡ್​ ವಿವಿಧ ರೀತಿಯಲ್ಲಿ ಟ್ರೋಲ್​ ಆಗುತ್ತಾ ಹೋಗುತ್ತದೆ. ಆದರೆ, ಈ ವರ್ಷ ವಿಭಿನ್ನ ಟ್ರೆಂಡ್​ ಒಂದು ತಂಡದ ಪರ ಶುರುವಾಗಿದೆ. ಕರೊನಾ ವೈರಸ್​ ನಡುವೆಯೂ ನಡೆದಿರುವ ಇತರ ಲೀಗ್​ಗಳಲ್ಲಿ ಕೆಂಪು ಬಣ್ಣದ ಜೆರ್ಸಿ ಹೊಂದಿರುವ ತಂಡಗಳೇ ಚಾಂಪಿಯನ್​ ಆಗಿವೆ. ಇದು ಆರ್​ಸಿಬಿ ಅಭಿಮಾನಿಗಳ ಕಪ್​ ಆಸೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಪ್ರಸಕ್ತ ವರ್ಷ ಇದುವರೆಗೂ ನಡೆದಿರುವ ಕ್ರೀಡಾ ಲೀಗ್​ಗಳಲ್ಲಿ ಕೆಂಪು ಬಣ್ಣದ ಜೆರ್ಸಿ ತೊಟ್ಟಿರುವ ತಂಡಗಳೇ ಚಾಂಪಿಯನ್​ ಆಗಿವೆ. ಇಂಗ್ಲೀಷ್​ ಪ್ರೀಮಿಯರ್​ ಲೀಗ್​ನಲ್ಲಿ (ಇಪಿಎಲ್​) ಕೆಂಪು ಬಣ್ಣ ಜೆರ್ಸಿ ತೊಟ್ಟಿದ್ದ ಲಿವರ್​ ಪೂಲ್​ ಚಾಂಪಿಯನ್​ ಆದರೆ, ಮೊನ್ನೆಯಷ್ಟೇ ನಡೆದ ಚಾಂಪಿಯನ್ಸ್​ ಲೀಗ್​ನಲ್ಲಿ ಜರ್ಮನಿಯ ವೃತ್ತಿಯ ಕ್ಲಬ್​ ಬೇಯರ್ನ್ಸ್​ ಮ್ಯೂನಿಚ್​ ತಂಡ ಚಾಂಪಿಯನ್​ ಆಯಿತು. ಈ ತಂಡದ ಜೆರ್ಸಿ ಕೂಡ ಕೆಂಪಾಗಿದೆ. ಇದು ಆರ್​ಸಿಬಿ ಪರ ಟ್ರೆಂಡ್​ ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳ ಆಸೆಗೆ ಮತ್ತಷ್ಟು ಇಂಬು ನೀಡಿದೆ..

ಆರ್​ಸಿಬಿ ತಂಡ ಇದುವರೆಗೂ 3 ಬಾರಿ ಫೈನಲ್​ ಪ್ರವೇಶಿಸಿದರೂ ಪ್ರಶಸ್ತಿ ಜಯಿಸುವಲ್ಲಿ ಎಡವಿದೆ. ಪ್ರತಿಸಲನೂ ನಿರಾಸೆ ಅನುಭವಿಸಿತ್ತಿರುವ ಆರ್​ಸಿಬಿ, ಈ ಬಾರಿ ಅಭಿಮಾನಿಗಳಿಗಾದರೂ ಕಪ್​ ಜಯಿಸಲಿ ಎಂಬುದೇ ಎಲ್ಲರ ಹಾರೈಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net