

RCB vs RR: ನಿನ್ನೆ (ಏ.24) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಆರ್ಆರ್ ನಡುವಿನ ಪಂದ್ಯ ಭಾರೀ ರೋಚಕತೆಗೆ ಸಾಕ್ಷಿಯಾಯಿತು. 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿದ ಆರ್ಸಿಬಿ, ರಾಜಸ್ಥಾನ ಪಡೆಗೆ 206 ರನ್ಗಳ ಗುರಿಯನ್ನು ಬೆನ್ನಟ್ಟುವಂತೆ ಸವಾಲು ಹಾಕಿತು. ಆದರೆ, ಅಂತಿಮವಾಗಿ 11 ರನ್ಗಳಿಂದ ಆರ್ಆರ್ ಸೋಲುಂಡಿತು.
ಆರ್ಸಿಬಿ ನೀಡಿದ ಗುರಿಯನ್ನು ಬೆನ್ನತ್ತಿದ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ರಘುವಂಶಿ, ಪವರ್ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್ ನೀಡಿದರು. ಈ ವೇಳೆ ಭುವನೇಶ್ವರ್ ಓವರ್ನಲ್ಲಿ ವಿಕೆಟ್ ಕಳೆದುಕೊಂಡ ವೈಭವ್, ಜೈಸ್ವಾಲ್ಗೆ ಸಾಥ್ ನೀಡುವಲ್ಲಿ ವಿಫಲರಾದರು. ಧೃತಿಗೆಡದ ಜೈಸ್ವಾಲ್, ಸ್ಫೋಟಕ ಇನ್ನಿಂಗ್ಸ್ ಮೂಲಕ ಅರ್ಧಶತಕಕ್ಕೆ ಒಂದೇ ಒಂದು ರನ್ ಸನಿಹದಲ್ಲಿದ್ದರು. ಈ ವೇಳೆ ಜೋಸ್ ಹೆಜಲ್ವುಡ್ ವಿಕೆಟ್ ಕಬಳಿಸಿ, ಜೈಸ್ವಾಲ್ರ ಅರ್ಧಶತಕ ಮೊಟಕುಗೊಳಿಸಿದರು.
ನಾಲ್ಕನೇ ಓವರ್ನಲ್ಲಿ ಹೆಜ್ಲ್ವುಡ್ ಬೌಲಿಂಗ್ಗೆ ಮೂರು ಬಾಲ್ ಡಾಟ್ ಮಾಡಿದ ಜೈಸ್ವಾಲ್, ಮುಂದಿನ ಮೂರು ಬಾಲ್ ಬೌಂಡರಿ ಬಾರಿಸಿದರು. ಈ ಮೂಲಕ ತಮ್ಮ ಶೈಲಿಯಲ್ಲೇ ಖಡಕ್ ಆಗಿ ಉತ್ತರಿಸಿದರು. ಆದರೆ, ಪವರ್ಪ್ಲೇ ಕೊನೆಯ ಓವರ್ನಲ್ಲಿ, ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಸಿಕ್ಸ್ ಸಿಡಿಸಿದ ಜೈಸ್ವಾಲ್, ಆತುರದಲ್ಲಿ ಬ್ಯಾಟ್ ಮಾಡಲು ಹೋಗಿ ಕ್ಯಾಚ್ ನೀಡಿದರು. ಯಶಸ್ವಿ ವಿಕೆಟ್ ಕಿತ್ತ ಸಂಭ್ರಮದಲ್ಲಿ ಕೈತೋರಿಸಿ ಔಟ್ ಎಂದ ಹೆಜಲ್ವುಡ್ ನಡೆಗೆ ಸಿಟ್ಟಾದ ಜೈಸ್ವಾಲ್, ಬೈಯುತ್ತಲೇ ಪೆವಿಲಿಯನ್ನತ್ತ ಸಾಗಿದ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಗೆಲ್ಲುವ ಪಂದ್ಯವನ್ನು 11 ರನ್ಗಳಿಂದ ಸೋಲುಂಡ ಆರ್ಆರ್, ಲೀಗ್ನಲ್ಲಿ ಸತತ ಐದನೇ ಪಂದ್ಯವನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ 8 ಸ್ಥಾನಕ್ಕೆ ಕುಸಿದಿದೆ,(ಏಜೆನ್ಸೀಸ್).